ಕರ್ನಾಟಕ

karnataka

ETV Bharat / state

ಬಡವರಿಗೆ ರೇಷನ್ ಕಿಟ್ ವಿತರಿಸುವ ಮೂಲಕ ಜನ್ಮದಿನ ಆಚರಿಸಿಕೊಂಡ ಮಾಜಿ ಕಾರ್ಪೋರೇಟರ್ - ರೇಷನ್ ಕಿಟ್ ವಿತರಣೆ

ಬಳ್ಳಾರಿ ಮಹಾನಗರದ 29ನೇ ವಾರ್ಡಿನ ಮಾಜಿ ಕಾರ್ಪೋರೇಟರ್ ಜೆ. ಚಂದ್ರ ಅವರು, ತಮ್ಮ ವಾರ್ಡ್ ವ್ಯಾಪ್ತಿಯ ರಾಮಾಂಜನೇಯ ನಗರದ ಬಡ ಕುಟುಂಬಗಳಿಗೆ ದಿನಸಿ ಹಾಗೂ ತರಕಾರಿ ತುಂಬಿದ ಕಿಟ್ ವಿತರಿಸಿದ್ರು.

kit
kit

By

Published : May 1, 2020, 2:42 PM IST

ಬಳ್ಳಾರಿ: ಲಾಕ್ ಡೌನ್​ನಿಂದ ಬಳ್ಳಾರಿ ಮಹಾನಗರ ಪಾಲಿಕೆ ಮಾಜಿ ಸದಸ್ಯರೊಬ್ಬರು ಬಡವರಿಗೆ ರೇಷನ್ ಕಿಟ್ ವಿತರಿಸುವ ಮೂಲಕ ಸರಳವಾಗಿ ತಮ್ಮ ಜನ್ಮದಿನವನ್ನ ಆಚರಿಸಿಕೊಂಡಿದ್ದಾರೆ.

ಬಳ್ಳಾರಿ ಮಹಾನಗರದ 29ನೇ ವಾರ್ಡಿನ ಮಾಜಿ ಕಾರ್ಪೋರೇಟರ್ ಜೆ. ಚಂದ್ರ ಅವರು, ತಮ್ಮ ವಾರ್ಡ್ ವ್ಯಾಪ್ತಿಯ ರಾಮಾಂಜನೇಯ ನಗರದ ಅಂದಾಜು 500 ಮಂದಿ ಬಡ ಕುಟುಂಬ‌ ಸದಸ್ಯರಿಗೆ ದಿನಸಿ ಹಾಗೂ ತರಕಾರಿ ತುಂಬಿದ ಕಿಟ್ ವಿತರಿಸಿದ್ರು.

ಬಡವರಿಗೆ ರೇಷನ್ ಕಿಟ್ ವಿತರಣೆ

ರಾಮಾಂಜನೇಯ ನಗರದ ಪ್ರತಿಯೊಂದು ಗುಡಿಸಲು ನಿವಾಸಿಗಳ ಮನೆಮನೆಗೆ ತೆರಳಿ ಮಾಜಿ ಕಾರ್ಪೋರೇಟರ್ ಚಂದ್ರ ಹಾಗೂ ಆತನ ಸ್ನೇಹಿತರು ರೇಷನ್ ಕಿಟ್ ವಿತರಿಸುವ ಮುಖೇನ ಜನ್ಮದಿನ ಆಚರಿಸಿಕೊಂಡು ಸರಳತೆ ಮೆರೆದರು.

ರೇಷನ್ ಕಿಟ್ ವಿತರಣೆಗೆ ಬಂದ ಮಾಜಿ ಕಾರ್ಪೋರೇಟರ್ ಚಂದ್ರ ಅವರ ಬಳಿ ಗುಡಿಸಲು ನಿವಾಸಿಗಳು ತಮಗೊಂದರಂತೆ ಆಶ್ರಯ ಮನೆಗಳನ್ನ ಮಂಜೂರಾತಿ ಮಾಡಿಕೊಡುವಂತೆ ಬೇಡಿಕೆ ಇಟ್ಟ ಪ್ರಸಂಗವೂ ನಡೆಯಿತು.

ABOUT THE AUTHOR

...view details