ಬಳ್ಳಾರಿ: ಜಿಲ್ಲೆಯ ಕುರುಗೋಡುವಿನಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಎಟಿಎಂನಿಂದ ಹಣ ಡ್ರಾ ಮಾಡುತ್ತಿರುವ ಬಗ್ಗೆ ಈಟಿವಿ ಭಾರತ ಪ್ರಕಟಿಸಿದ್ದ ವರದಿಗೆ ತಹಶೀಲ್ದಾರ್ ಸ್ಪಂದಿಸಿದ್ದಾರೆ.
ಪಿಂಚಣಿ ಸೇರಿದಂತೆ ಸರ್ಕಾರದ ವಿವಿಧ ಯೋಜನೆಗಳ ಹಣ ಪಡೆದುಕೊಳ್ಳಲು ಜನ ಯಾವುದೇ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಎಟಿಎಂ ಮುಂದೆ ಗುಂಪಾಗಿ ಸೇರಿದ್ದರು. ಈ ಬಗ್ಗೆ " ಲಾಕ್ ಡೌನ್ ಗೆ ಕ್ಯಾರೆ ಎನ್ನದ ಕುರುಗೋಡು ಜನ.." ಎಂಬ ಶೀರ್ಷಿಕೆಯಡಿ ಈಟಿವಿ ಭಾರತ ವರದಿ ಪ್ರಕಟಿಸಿತ್ತು. ಇದನ್ನು ಗಮನಿಸಿದ ಕುರುಗೋಡು ತಹಶೀಲ್ದಾರ್, ಆದೇಶ ಹೊರಡಿಸಿ ಆ ಪ್ರತಿಯನ್ನು ಈಟಿವಿ ಭಾರತದ ಬಳ್ಳಾರಿ ಪ್ರತಿನಿಧಿಗೆ ಕಳಿಸಿದ್ದಾರೆ.