ಕರ್ನಾಟಕ

karnataka

ETV Bharat / state

ಬಳ್ಳಾರಿ ಕಾಂಗ್ರೆಸ್​ನಿಂದ ಕೋವಿಡ್-19 ಟಾಸ್ಕ್ ಪೋರ್ಸ್, ಪರಿಹಾರ ನಿಧಿ ಸ್ಥಾಪನೆ

ಕೊವಿಡ್​-19 ಪರಿಹಾರ ಕಾರ್ಯಗಳಿಗೆ ನೆರವಾಗುವ ಸಲುವಾಗಿ ಬಳ್ಳಾರಿ ಜಿಲ್ಲಾ ಕಾಂಗ್ರೆಸ್​ ಸಮಿತಿಯು ಟಾಸ್ಕ್ ಪೋರ್ಸ್ ಸಮಿತಿ ಹಾಗೂ ಕೆಪಿಸಿಸಿ ಪರಿಹಾರ ನಿಧಿ ಸ್ಥಾಪಿಸಿದೆ.

Breaking News

By

Published : Apr 7, 2020, 10:16 AM IST

ಬಳ್ಳಾರಿ: ಕೋವಿಡ್​-19 ಪರಿಹಾರ ಕಾರ್ಯಗಳಿಗೆ ನೆರವಾಗಲು ಜಿಲ್ಲಾ ಕಾಂಗ್ರೆಸ್​ ಸಮಿತಿಯು ಟಾಸ್ಕ್ ಪೋರ್ಸ್ ಸಮಿತಿ ಹಾಗೂ ಕೆಪಿಸಿಸಿ ಪರಿಹಾರ ನಿಧಿ ಸ್ಥಾಪಿಸಿದೆ.

ನಗರದ ಗಡಿಗಿ ಚನ್ನಪ್ಪ ವೃತ್ತದ ಎದುರು ಮಹಾನಗರ ಪಾಲಿಕೆ ವಾಣಿಜ್ಯ ಮಳಿಗೆ ನಂ 4ರಲ್ಲಿ ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿಯ ಕಚೇರಿ ತೆರೆಯಲಾಗಿದೆ. ಪರಿಹಾರ ನಿಧಿಗೆ ಸಹಾಯ ಮಾಡಲು ಇಚ್ಚಿಸುವವರು ಸಮಿತಿಯ ಬ್ಯಾಂಕ್ ಖಾತೆಗೆ ನೀಡಬಹುದಾಗಿದೆ. ಅಥವಾ ನೇರವಾಗಿ ಪಕ್ಷದ ಕಚೇರಿಗೆ ಡಿಡಿ ಅಥವಾ ಚೆಕ್ ಅನ್ನು‌ ನೀಡಬಹುದೆಂದು ಟಾಸ್ಕ್ ಪೋರ್ಸ್ ಸಮಿತಿ ಅಧ್ಯಕ್ಷ ಜೆ.ಎಸ್‌.ಆಂಜನೇಯಲು ತಿಳಿಸಿದ್ದಾರೆ.

ಕೋವಿಡ್-19 ಟಾಸ್ಕ್ ಪೋರ್ಸ್, ಪರಿಹಾರ ನಿಧಿ ಸ್ಥಾಪನೆ
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಸುಂಡಿ ಬಿ.ನಾಗರಾಜಗೌಡ, ಮಹಾನಗರ ಪಾಲಿಕೆ ಮಾಜಿ ಸದಸ್ಯರಾದ ಬಿ.ಕೆ.ಕೆರೆ ಕೊಡಪ್ಪ, ಎಸ್.ಎಂ.ಮಹಮ್ಮದ್​, ಪ್ರಚಾರ ಸಮಿತಿ ನಗರಾಧ್ಯಕ್ಷ ಬೊಯಪಾಟಿ ವಿಷ್ಣುವರ್ಧನ, ಮುಖಂಡರಾದ ವಿವೇಕ, ಹರ್ಷದ್ ಅಹ್ಮದ್, ಜಿ.ಜೆ.ರವಿಕುಮಾರ,‌ ಮಹಮ್ಮದ್ ಅಜಂ, ಪೆದ್ದ ಯರ್ರಿಸ್ವಾಮಿ, ನಾಗಭೂಷಣಗೌಡ, ಸಂತೋಷ ಸ್ವಾಮಿ, ಶ್ರೀರಾಂಪುರ ಶೀನಾ, ಹೊನ್ನಪ್ಪ, ಶೋಭಾ, ಕಾಳಿಂಗ, ದ್ರಾಕ್ಷಾಯಿಣಿ ಇದ್ದರು.

ABOUT THE AUTHOR

...view details