ಕರ್ನಾಟಕ

karnataka

ETV Bharat / state

ನ್ಯಾಯಬೆಲೆ ಅಂಗಡಿಗಳನ್ನು ಹೆಚ್ಚಿಸಿ ಮನೆ ಮನೆಗೆ ದಿನಸಿ ನೀಡಿ: ಡಿಸಿಎಂ ಲಕ್ಷ್ಮಣ ಸವದಿ - ಹೊಸಪೇಟೆ ಕೋವಿಡ್-19

ನಗರದಲ್ಲಿರುವ ನ್ಯಾಯಬೆಲೆ ಅಂಗಡಿಗಳು ತಮ್ಮ ಉಪಕೇಂದ್ರಗಳನ್ನು ಹೆಚ್ಚಿಸಬೇಕು ಮತ್ತು ಮನೆ-ಮನೆಗೆ ಪಡಿತರ ಒದಗಿಸುವ ಕ್ರಮಕೈಗೊಳ್ಳಿ ಎಂದು ಡಿಸಿಎಂ ಲಕ್ಷ್ಮಣ ಸವದಿ ಜಿಲ್ಲಾಡಳಿತಕ್ಕೆ ಸೂಚಿಸಿದರು.

savdi
savdi

By

Published : Apr 8, 2020, 8:40 AM IST

ಹೊಸಪೇಟೆ:ಜಿಲ್ಲೆಯಲ್ಲಿ 6ಕೊರೊನಾ ಸೊಂಕಿತರು ಇದ್ದು, ಪ್ರಕರಣಗಳ ಸಂಖ್ಯೆ ಹೆಚ್ಚಾಗದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದು ಉಪಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ ಅವರು ಜಿಲ್ಲಾಡಳಿತಕ್ಕೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಕೋವಿಡ್-19 ಹಿನ್ನೆಲೆ ಬಳ್ಳಾರಿ ಜಿಲ್ಲೆಯ ಕಮಲಾಪುರ ಮಯೂರ್ ಭುವನೇಶ್ವರಿ ಹೋಟಲ್ ಸಭಾಂಗಣದಲ್ಲಿ ಇಂದು ಸಂಜೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು, ಈಗಾಗಲೇ ಜಿಲ್ಲಾಡಳಿತ ಒಳ್ಳೆಯ ರೀತಿಯ ಕೆಲಸ ಮಾಡುತ್ತಿದೆ. ಆದರೂ ಪ್ರಕರಣಗಳು ದೃಢಪಟ್ಟಿರುವುದು ತಮ್ಮೆಲ್ಲರಿಗೂ ಪರೀಕ್ಷೆಯ ಕಾಲವಿದ್ದಂತೆ. ಹಾಗಾಗಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಕ್ರಮ ಕೈಗೊಂಡು, ಜನರು ಗುಂಪುಗೂಡದಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.

ಡಿಸಿಎಂ ಲಕ್ಷ್ಮಣ ಸವದಿ ಸಭೆ

ಲಾಕ್ ಡೌನ್ ಮುಂದುವರಿಸುವಿಕೆ ತೀರ್ಮಾನ
ರಾಜ್ಯದಲ್ಲಿ ಏ‌.14ರ ನಂತರವೂ ಲಾಕ್ ಡೌನ್ ಮುಂದುವರಿಸಬೇಕೆ ಅಥವಾ ಬೇಡವೇ ಅಥವಾ ಹಂತಹಂತವಾಗಿ ಲಾಕ್ ಡೌನ್ ಕೈಬಿಡಬೇಕೇ ಎಂಬುದಕ್ಕೆ ಸಂಬಂಧಿಸಿದಂತೆ ರಾಜ್ಯಮಟ್ಟದಲ್ಲಿ ತೀರ್ಮಾನ ಕೈಗೊಳ್ಳಲಾಗುವುದು. ಲಾಕ್ ಡೌನ್‌ ಮುಂದುವಿರಿಸಬೇಕೆ ಅಥವಾ ಬೇಡವೇ ಎಂಬುದಕ್ಕೆ ಸಂಬಂಧಿಸಿದಂತೆ ಸಲಹೆ ನೀಡಿ ಎಂದು ಶಾಸಕರಲ್ಲಿ ಮನವಿ ಮಾಡಿದರು.

ಹೊಸಪೇಟೆಯನ್ನು ವಿಶೇಷ ಪ್ರಕರಣವೆಂದು‌ ಪರಿಗಣಿಸಿ ನಗರದಲ್ಲಿರುವ 29 ನ್ಯಾಯಬೆಲೆ ಅಂಗಡಿಗಳು ತಮ್ಮ ಉಪಕೇಂದ್ರಗಳನ್ನು ಹೆಚ್ಚಿಸಬೇಕು ಮತ್ತು ಮನೆ-ಮನೆಗೆ ಪಡಿತರ ಒದಗಿಸುವ ನಿಟ್ಟಿನಲ್ಲಿ ವಾಹನಗಳಲ್ಲಿ ಎಲ್ಲಾ ಪಡಿತರಗಳನ್ನು ಹಾಕಿಕೊಂಡು ಪಡಿತರದಾರರ ಪಟ್ಟಿ ಅನುಸಾರ ಅವರ ಮನೆ-ಮನೆಗೆ ತಲುಪಿಸುವಲ್ಲಿ ಕ್ರಮಕೈಗೊಳ್ಳಿ ಎಂದು ಅವರು ಜಿಲ್ಲಾಡಳಿತಕ್ಕೆ ಸೂಚಿಸಿದರು.

ಉಪಕೇಂದ್ರಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕ್ರಮ ಜರುಗಿಸಿ ಎಂದು ಹೇಳಿದ ಅವರು, ನಿರ್ವಹಣೆ ಮತ್ತು ಸಾರಿಗೆ ವೆಚ್ಚವನ್ನು ಜಿಲ್ಲಾಡಳಿತದ ವೆಚ್ಚದಡಿ ಭರಿಸಿ ಎಂದು ಡಿಸಿ ನಕುಲ್ ಅವರಿಗೆ ಸೂಚಿಸಿದರು.

ABOUT THE AUTHOR

...view details