ಕರ್ನಾಟಕ

karnataka

ETV Bharat / state

ರಾಜಕಾರಣದಲ್ಲಿ ಬಹಳ ಮಂದಿ ಹರಕೆ ಕುರಿ ಆಗ್ತಿದ್ದಾರೆ: ಸಚಿವ ಈಶ್ವರಪ್ಪ

ಇಂದು ಜಿಲ್ಲೆಯ ಹಡಗಲಿ ಪಟ್ಟಣದಲ್ಲಿ ಕನಕ ಪತ್ತಿನ ಸೌಹಾರ್ದ ಸಹಕಾರ ಸಂಘದ ನೂತನ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿ ಸಚಿವ ಕೆ.ಎಸ್.ಈಶ್ವರಪ್ಪನವರು ಈಗೀನ ರಾಜಕಾರಣದ ಕುರಿತು ತಮ್ಮ ಅನಿಸಿಕೆಯನ್ನು ಹಂಚಿಕೊಂಡರು.

Eshwarappa

By

Published : Nov 4, 2019, 9:44 PM IST

ಬಳ್ಳಾರಿ:ಇತ್ತೀಚಿನ ದಿನಗಳಲ್ಲಿ ರಾಜಕಾರಣದಲ್ಲಿ ಬಹಳ ಮಂದಿ ಹರಕೆ ಕುರಿ ಆಗುತ್ತ ಇದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಪರೋಕ್ಷವಾಗಿ ಯಾರ ಹೆಸರು ಹೇಳದೆ ವಾಗ್ದಾಳಿ ನಡೆಸಿದ್ದಾರೆ.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ

ಜಿಲ್ಲೆಯ ಹಡಗಲಿ ಪಟ್ಟಣದಲ್ಲಿ ಕನಕ ಪತ್ತಿನ ಸೌಹಾರ್ದ ಸಹಕಾರ ಸಂಘದ ನೂತನ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿ ಬಳಿಕ ಮಾತನಾಡಿದ ಅವರು, ಹರಕೆ ಕುರಿ ಪದ ಪ್ರಯೋಗ ಬಹಳ ಸುಲಭ. ಆದ್ರೆ ಪ್ರಸ್ತುತ ರಾಜಕಾರಣದಲ್ಲಿ ಬಹಳ ಮಂದಿ ಜನಪ್ರತಿನಿಧಿಗಳು ಹರಕೆ ಕುರಿ ಆಗುತ್ತಿದ್ದಾರೆ ಎಂದರು.

ನಾನು ಮೊದಲ ಬಾರಿಗೆ ಚುನಾವಣೆಗೆ ನಿಂತಾಗ ಕೇವಲ 6 ಸಾವಿರ ಮಾತ್ರ ಕುರುಬ ಸಮುದಾಯದ ಮತಗಳಿದ್ದವು. ಲಿಂಗಾಯತರು, ಬ್ರಾಹ್ಮಣರು ಹಾಗೂ‌ ಮುಸ್ಲಿಂಮರ ಮತಗಳೆ ಬಹಳಷ್ಟಿದ್ದವು. ಆದರೆ ನಾನು ಧೃತಿಗೆಡಲಿಲ್ಲ. ಎಲ್ಲಾ ಸಮುದಾಯವನ್ನು ಸಮಾನವಾಗಿ ಪ್ರೀತಿಸುವ ಗುಣವನ್ನು‌ ನಾನು ಹೊಂದಿದ್ದೇ ನನ್ನ ಗೆಲುವಿಗೆ ಸಹಕಾರಿಯಾಯಿತು ಎಂದರು.

ಮುಂದುವರೆದು ನನ್ನ ಸಮುದಾಯ ಇಲ್ಲದಿದ್ದರೂ ಏನಂತೆ, ಅನ್ಯ ಸಮುದಾಯದ ಪ್ರೀತಿ ಗಳಿಸೋದರಿಂದ ನಮ್ಮನ್ನು ಎತ್ತಿ ಹಿಡಿಯುತ್ತಾರೆ. ಅಂತಹ ಭಾವನೆಯನ್ನು ಮೈಗೂಡಿಸಿಕೊಳ್ಳಬೇಕು. ಹಡಗಲಿಯ ಕಾಂಗ್ರೆಸ್ ಶಾಸಕ ಪಿ.ಟಿ.ಪರಮೇಶ್ವರ ನಾಯ್ಕ್​ ಹೆಸರನ್ನು ಉಚ್ಚರಿಸುವ ಮೂಲಕ ಹರಕೆ ಕುರಿ ಪದ ಪ್ರಯೋಗ ಮಾಡಿರೋದು ಸಭಿಕರಲ್ಲಿ ಅಚ್ಚರಿ ಮೂಡಿಸಿತು.

ABOUT THE AUTHOR

...view details