ಬಳ್ಳಾರಿ: ಕಾಂಗ್ರೆಸ್ ಎಂಎಲ್‌ಸಿ ಕೆ ಸಿ ಕೊಂಡಯ್ಯ ನೆಕ್ಸ್ಟ್ ಎಂಎಲ್‌ಸಿ ಆಗೋರು ಅಂತ ಬಳ್ಳಾರಿ ನಗರ ಶಾಸಕ ಗಾಲಿ ಸೋಮಶೇಖರರೆಡ್ಡಿ ಕಾಲೆಳೆದಾಗ, ಸಚಿವ ಈಶ್ವರಪ್ಪ ಅವರು ನೆಕ್ಟ್ಸ್ ಎಂಎಲ್‌ಸಿ ಆಗ್ಬೇಕಂದ್ರೆ ನಮ್ ಪಾರ್ಟಿಗೆ ಬರಬೇಕು ಎಂದು ಕಿಚಾಯಿಸಿರುವ ಪ್ರಸಂಗವೊಂದು ನಡೆದಿದೆ.
ಬಳ್ಳಾರಿಯ ಜಿಲ್ಲಾ ಕ್ರೀಡಾಂಗಣದಲ್ಲಿ ಘನತ್ಯಾಜ್ಯ ವಿಲೇವಾರಿ ವಾಹನಗಳ ಲೋಕಾರ್ಪಣೆ ಮಾಡುವ ವೇಳೆ ಸಚಿವ ಈಶ್ವರಪ್ಪ ಆಗಮಿಸುತ್ತಿದ್ದಂತೆಯೇ ಸನ್ಮಾನ ಮಾಡಲು ಎಂಎಲ್‌ಸಿ ಕೊಂಡಯ್ಯ ಮುಂದಾದ್ರು. ಸಚಿವ ಈಶ್ವರಪ್ಪನವರ ಹಿಂದೆ ಇದ್ದ ಬಳ್ಳಾರಿ ನಗರ ಶಾಸಕ ಗಾಲಿ ಸೋಮಶೇಖರರೆಡ್ಡಿ ನೆಕ್ಟ್ಸ್ ಎಂಎಲ್‌ಸಿ ಆಗೋರು ಎಂದ್ರು.