ಬಳ್ಳಾರಿ: ನಗರದ ಜಿಲ್ಲಾಧಿಕಾರಿ ಕಚೇರಿಯ ಆವರಣದಲ್ಲಿ ಪಿಂಚಣಿ, ಸಣ್ಣ ಉಳಿತಾಯ ಮತ್ತು ಆಸ್ತಿ ಋಣ ನಿರ್ವಹಣೆ ಇಲಾಖೆಯಲ್ಲಿ ನಿವೃತ್ತಿ ಹೊಂದಿದ ಸರ್ಕಾರಿ ನೌಕರರ ಪಿಂಚಣಿ ಅದಾಲತ್ ಸಭೆ ನಡೆಯಿತು.
ಬಳ್ಳಾರಿಯಲ್ಲಿ ಪಿಂಚಣಿಗಾಗಿ ನೌಕರರ ಪರದಾಟ.. ಅಧಿಕಾರಿಗಳ ವಿರುದ್ದ ಅಸಮಾಧಾನ.. - Pension Adalat Meeting
ಬಳ್ಳಾರಿಯ ಜಿಲ್ಲಾಧಿಕಾರಿ ಕಚೇರಿಯ ಆವರಣದಲ್ಲಿ ಪಿಂಚಣಿ, ಸಣ್ಣ ಉಳಿತಾಯ ಮತ್ತು ಆಸ್ತಿ ಋಣ ನಿರ್ವಹಣೆ ಇಲಾಖೆಯಲ್ಲಿ ನಿವೃತ್ತ ಹೊಂದಿದ ಸರ್ಕಾರಿ ನೌಕರರ ಪಿಂಚಣಿ ಅದಾಲತ್ ಸಭೆ ನಡೆಯಿತು.

ಕಾರ್ಯಕ್ರಮದಲ್ಲಿ ನಿವೃತ್ತಿ ಹೊಂದಿರುವ ಸರ್ಕಾರಿ ನೌಕರರು ತಮ್ಮ ನೋವುಗಳನ್ನು, ಸಮಸ್ಯೆಗಳನ್ನು ಈಟಿವಿ ಭಾರತನೊಂದಿಗೆ ಹಂಚಿಕೊಂಡಿದ್ದು, ಗಣಿನಾಡು ಬಳ್ಳಾರಿ ಡಿಡಿಪಿಐ ಕಚೇರಿಯಲ್ಲಿ 15 ರಿಂದ 20 ವರ್ಷಗಳ ಕಾಲ ಅಧಿಕಾರಿಗಳು ಮತ್ತು ಕ್ಲರ್ಕ್ ಅಲ್ಲಿಯೇ ಇದ್ದಾರೆ. ನೌಕರರು ನಿವೃತ್ತಿಯಾದ್ರೇ ನೌಕರರ ಎಸ್ ಆರ್(ಸೇವಾ ಪುಸ್ತಕ) ಇರಲ್ಲ. ಬಿಇಒ ಕೇಳಿದರೇ ಹೋಗಯ್ಯ ಎಂದು ಹೇಳಿ ಕಳಿಸುತ್ತಾರೆ. 60 ವರ್ಷವಾದ ನಂತರ ನಮಗೆ ನಡೆದಾಡುವುದು ಕಷ್ಟ. ಪಿಂಚಣಿ ಇಲ್ಲದೇ ಪರದಾಡುವ ಪರಿಸ್ಥಿತಿ ಉಂಟಾಗಿದೆ. ಇದಕ್ಕೆಲ್ಲಾ ಕಚೇರಿಯಲ್ಲಿನ ಅಧಿಕಾರಿಗಳು ಮತ್ತು ಸಿಬ್ಬಂದಿ ನಿರ್ಲಕ್ಷವೇ ಕಾರಣ ಎಂದು ದೂರಿದ್ದಾರೆ.
ಸಭೆಯಲ್ಲಿ ಪಿಂಚಣಿ, ಸಣ್ಣ ಉಳಿತಾಯ ಮತ್ತು ಆಸ್ತಿ ಋಣ ನಿರ್ವಹಣೆ ಇಲಾಖೆ ಸಹಾಯಕ ನಿರ್ದೇಶಕಿ ಸಾವಿತ್ರಿ ಇನ್ನಿತರ ಅಧಿಕಾರಿಗಳು, ಬ್ಯಾಂಕ್ ಅಧಿಕಾರಿಗಳು ಹಾಜರಿದ್ದರು.