ಕರ್ನಾಟಕ

karnataka

ETV Bharat / state

ಪಿಸಿಪಿಎನ್‌ಡಿಟಿ ಆಕ್ಟ್‌ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿ.. ಡಿಹೆಚ್‌ಒ ಡಾ. ಜನಾರ್ಧನ್​ - ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಹೆಚ್.ಜನಾರ್ಧನ್

ಜಿಲ್ಲೆಯ ಯಾವುದೇ ಸ್ಯ್ಕಾನ್​​ ಸೆಂಟರ್‌ಗಳಲ್ಲಿನ ಯಂತ್ರದ ಪ್ರತಿ ಉಪಕರಣಗಳು ಹಾಗೂ ವ್ಯಕ್ತಿಗಳ ದಾಖಲಾತಿಗಳನ್ನು ನೋಂದಣಿಯಾಗಿರಬೇಕು. ಸ್ಕ್ಯಾನ್‌ ಮಾಡಿದವರ ಮಾಹಿತಿಯನ್ನು ತಪ್ಪದೇ ನೋಂದಣಿ ಮಾಡಿಸಿರಬೇಕು, ತಪ್ಪಿದ್ದಲ್ಲಿ ಅವರ ವಿರುದ್ಧ ಕ್ರಿಮಿನಲ್ ಕೇಸ್ ನಮೂದಿಸಲಾಗುವುದು ಎಂದು ಎಚ್ಚರಿಕೆ ನೀಡಿದರು..

enforce-the-p-c-p-n-d-t-act-says-janardhan
ಡಿ.ಹೆಚ್.ಓ ಡಾ. ಜನಾರ್ಧನ್

By

Published : Jul 10, 2020, 8:56 PM IST

ಬಳ್ಳಾರಿ :ಗರ್ಭಪೂರ್ವ ಮತ್ತು ಪ್ರಸವ ಪೂರ್ವ ಭ್ರೂಣ ಪತ್ತೆ ತಂತ್ರ ವಿಧಾನವನ್ನು ಜಿಲ್ಲೆಯಲ್ಲಿ ಪಿಸಿ ಮತ್ತು ಪಿಎನ್‌ಡಿಟಿ ಲಿಂಗ ಆಯ್ಕೆ ನಿಷೇಧ ಕಾಯ್ದೆಯ ಅನ್ವಯ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಹೆಚ್ ಜನಾರ್ಧನ್ ಹೇಳಿದರು.

ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಚೇರಿಯ ಸಭಾಂಗಣದಲ್ಲಿ ನಡೆದ ಪಿಸಿ ಮತ್ತು ಪಿಎನ್‌ಡಿಟಿ ಲಿಂಗ ಆಯ್ಕೆ ನಿಷೇಧ ಕಾಯ್ದೆಯ ಅನುಷ್ಠಾನದ ಜಿಲ್ಲಾ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲೆಯ ಯಾವುದೇ ಸ್ಯ್ಕಾನ್​​ ಸೆಂಟರ್‌ಗಳಲ್ಲಿನ ಯಂತ್ರದ ಪ್ರತಿ ಉಪಕರಣಗಳು ಹಾಗೂ ವ್ಯಕ್ತಿಗಳ ದಾಖಲಾತಿಗಳನ್ನು ನೋಂದಣಿಯಾಗಿರಬೇಕು. ಸ್ಕ್ಯಾನ್‌ ಮಾಡಿದವರ ಮಾಹಿತಿಯನ್ನು ತಪ್ಪದೇ ನೋಂದಣಿ ಮಾಡಿಸಿರಬೇಕು, ತಪ್ಪಿದ್ದಲ್ಲಿ ಅವರ ವಿರುದ್ಧ ಕ್ರಿಮಿನಲ್ ಕೇಸ್ ನಮೂದಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಸ್ಕ್ಯಾನ್​​​ ಸೆಂಟರ್‌ಗಳಲ್ಲಿ ಭ್ರೂಣಲಿಂಗ ಪತ್ತೆ ಕುರಿತು ದೊಡ್ಡ ಅಕ್ಷರಗಳಲ್ಲಿ ಸಾರ್ವಜನಿಕರಿಗೆ ಕಾಣುವಂತೆ ನಾಮಫಲಕಗಳನ್ನು ಹಾಕಬೇಕು. ಸ್ಕ್ಯಾನ್ ಸೆಂಟರ್‌ಗಳು ಪ್ರತಿ ತಿಂಗಳ 5 ತಾರೀಖಿನೊಳಗಾಗಿ ಜಿಲ್ಲಾ ಆಸ್ಪತ್ರೆಗೆ ವರದಿಯನ್ನು ನೀಡಬೇಕು. ಕಾನೂನು ಬಾಹಿರ ಚಟುವಟಿಕೆಗಳು ಕಂಡು ಬಂದಲ್ಲಿ ಅವರ ಮೇಲೆ ಕಾನೂನು ಶಿಸ್ತು ಕ್ರಮ ಜರುಗಿಸಲಾಗುತ್ತದೆ ಎಂದು ಹೇಳಿದರು.

ಈ ಪಿಸಿ ಮತ್ತು ಪಿಎನ್‌ಡಿಟಿ ಲಿಂಗ ಆಯ್ಕೆಯ ನಿಷೇಧ ಕಾಯ್ದೆ ಅನುಷ್ಠಾನ ಸಮಿತಿಯಲ್ಲಿ ಸಲಹಾ ಸಮಿತಿ ಹಾಗೂ ತಪಾಸಣೆ ಮತ್ತು ಮಾನಿಟರ್ ಸಮಿತಿ ರಚಿಸಲಾಗಿದೆ. ಯಾವುದೇ ದೂರುಗಳು ಬಂದಲ್ಲಿ ಅವುಗಳನ್ನು ಸಲಹಾ ಸಮಿತಿಯಲ್ಲಿ ಚರ್ಚಿಸಿ ಮುಂದಿನ ಕ್ರಮ ಜರುಗಿಸಲಾಗುವುದು ಎಂದರು.

ABOUT THE AUTHOR

...view details