ಹೊಸಪೇಟೆ: ಜೆಸ್ಕಾಂಗೆ ಪಾವತಿಸುವ ವಿದ್ಯುತ್ ಬಿಲ್ 22 ಕೋಟಿ ರೂ. ಬಾಕಿ ಇದ್ದು, ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ. ನಗರಸಭೆ, ಕಮರ್ಷಿಯಲ್, ಗೃಹ ಬಳಕೆ, ಕೈಗಾರಿಕೆ ಸೇರಿದಂದೆ ನಾನಾ ವಲಯಗಳು ವಿದ್ಯುತ್ ಬಿಲ್ ಪಾವತಿಸದೇ ಬಾಕಿ ಉಳಿಸಿಕೊಂಡಿವೆ.
ಕೊರೊನಾ ಲಾಕ್ಡೌನ್ ಸಮಯದ ವಿದ್ಯುತ್ ಬಿಲ್ನ ಜನ ಬಾಕಿ ಉಳಿಸಿಕೊಂಡಿದ್ದಾರೆ. ಇದು ಜೆಸ್ಕಾಂಗೆ ನುಂಗಲಾರದ ತುತ್ತಾಗಿದೆ. ನಗರಸಭೆ ಬರೋಬ್ಬರಿ 11 ಕೋಟಿ ರೂ. ಬಾಕಿ ಉಳಿಸಿಕೊಂಡಿದೆ. ನಗರಸಭೆ ಒಳಪಡುವ ಬಳಕೆ ಮಾಡುವ ವಿದ್ಯುತ್ ಬಿಲ್ ಪಾವತಿಸಿಲ್ಲ. ತಿಂಗಳಿಂದ ತಿಂಗಳಿಗೆ ವಿದ್ಯುತ್ ಬಿಲ್ ಬೆಳೆಯುತ್ತಾ ಹೋಗುತ್ತಿದೆ.
ಜೆಸ್ಕಾಂಗೆ ಪಾವತಿಸಬೇಕಾದ ವಿದ್ಯುತ್ ಬಿಲ್ ₹22 ಕೋಟಿ ಬಾಕಿ.. ಈ 11 ಕೋಟಿ ರೂ. ವಿದ್ಯುತ್ ಬಾಕಿ ಬಿಲ್ಗೆ 84 ಲಕ್ಷ ರೂ.ಬಡ್ಡಿ ಬೆಳೆದಿದೆ. ನಗರವಾಸಿಗಳು ಬರೋಬ್ಬರಿ 8 ಕೋಟಿ ರೂ. ಬಿಲ್ ಬಾಕಿ ಉಳಿಸಿಕೊಂಡಿದ್ದಾರೆ. ಶೇ.50ರಷ್ಟು ಮಾತ್ರ ಬಿಲ್ ಪಾವತಿಯಾಗಿದೆ. ಬಾಕಿ ಉಳಿಸಿಕೊಂಡವರ ವಿದ್ಯುತ್ ಕಡಿತಗೊಳಿಸಲಾಗುತ್ತಿದೆ. ಆದರೆ, ಜನ ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆಯುತ್ತಿದ್ದಾರೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.
ಕಮರ್ಷಿಯಲ್ ಉದ್ದೇಶಕ್ಕಾಗಿ ವಿದ್ಯುತ್ ಸಂಪರ್ಕ ಹೊಂದಿದವರು 1.65 ಕೋಟಿ ರೂ. ಹಾಗೂ ಕೈಗಾರಿಕೆಯಿಂದ ₹65 ಲಕ್ಷ ಸೇರಿದಂತೆ ಇತರೆ 22 ಕೋಟಿ ರೂ. ಬಾಕಿ ಹಣ ಜೆಸ್ಕಾಂಗೆ ಪಾವತಿಯಾಗಬೇಕಾಗಿದೆ. ಈ ಬಗ್ಗೆ ಮಾತನಾಡಿರುವ ನಗರಸಭೆ ಪೌರಾಯುಕ್ತ ಮನ್ಸೂರ್ ಅಲಿ, ಸರ್ಕಾರದಿಂದ ವಿದ್ಯುತ್ ಬಿಲ್ ಪಾವತಿಸುವುದು ವಿಳಂಬವಾಗಿದೆ.
ಹಾಗಾಗಿ, ವಿದ್ಯುತ್ ಬಿಲ್ ಬಾಕಿ ಉಳಿದಿದೆ. ವಿದ್ಯುತ್ ಬಿಲ್ ಕಡಿಮೆಗೊಳಿಸಲು ಸೋಲಾರ್ ಬಳಕೆ ಮಾಡುವ ಪ್ರಯತ್ನ ಮಾಡುವ ಉದ್ದೇಶ ಹೊಂದಲಾಗಿದೆ ಎಂದರು. ಜೆಸ್ಕಾಂನ ಪ್ರಭಾರ ಕಾರ್ಯನಿರ್ವಾಹಕ ಇಂಜಿನಿಯರ್ ಮಾತನಾಡಿ, ಲಾಕ್ಡೌನ್ನಲ್ಲಿ ಹೆಚ್ಚಿನ ಜನ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿದ್ದಾರೆ. ಜನ ಬಾಕಿ ಇರುವ ವಿದ್ಯುತ್ ಬಿಲ್ ಪಾವತಿಸಬೇಕು ಎಂದರು.