ಬಳ್ಳಾರಿ: ಟ್ರ್ಯಾಕ್ಟರ್ ಮೂಲಕ ಹುರುಳಿ ಹುಲ್ಲನ್ನು ಸಾಗಿಸುತ್ತಿದ್ದ ವೇಳೆ ವಿದ್ಯುತ್ ಸ್ಪರ್ಶಿಸಿ ಮೇವು ಸಂಪೂರ್ಣ ಸುಟ್ಟುಹೋದ ಘಟನೆ ನಡೆದಿದೆ.
ಟ್ರ್ಯಾಕ್ಟರ್ನಲ್ಲಿದ್ದ ಮೇವಿಗೆ ವಿದ್ಯುತ್ ಸ್ಪರ್ಶ: ಸುಟ್ಟು ಭಸ್ಮವಾದ ಮೇವು - Bellary News
ಟ್ರ್ಯಾಕ್ಟರ್ ಮೂಲಕ ಸಾಗಿಸುತ್ತಿದ್ದ ಹುಲ್ಲಿಗೆ ವಿದ್ಯುತ್ ಸ್ಪರ್ಶಿಸಿದ ಪರಿಣಾಮ ಮೇವು ಸಂಪೂರ್ಣ ಸುಟ್ಟು ಕರಕಲಾಗಿದೆ.

ಮೇವಿಗೆ ವಿದ್ಯುತ್ ಸ್ಪರ್
ಕೂಡ್ಲಿಗಿ ತಾಲೂಕಿನ ಆಲೂರಿನ ರೈತ ಬಸವರಾಜಗೌಡ ಎಂಬುವರು ತನ್ನ ಜಮೀನಿಂದ ಹುರುಳಿ ಬೆಳೆಯನ್ನ ಗ್ರಾಮದಲ್ಲಿರುವ ಕಣಕ್ಕೆ ತೆಗೆದುಕೊಂಡು ಹೋಗುತ್ತಿದ್ದರು. ಈ ವೇಳೆ ವಿದ್ಯುತ್ ವೈಯರ್ ತಗುಲಿ ಬೆಂಕಿ ಹತ್ತಿಕೊಂಡಿದ್ದು, ಚಾಲಕನ ಸಮಯ ಪ್ರಜ್ಞೆಯಿಂದಾಗಿ ರಸ್ತೆಯಲ್ಲಿಯೇ ಹುಲ್ಲನ್ನು ಕೆಳಗೆ ಕೆಡವಿದ್ದಾನೆ. ಪರಿಣಾಮ ನಡೆಯಬಹುದಾದ ಭಾರಿ ಅನಾಹುತ ತಪ್ಪಿದಂತಾಗಿದೆ.
ಇನ್ನು ಘಟನಾ ಸ್ಥಳಕ್ಕೆ ದಾವಣಗೆರೆ ಜಿಲ್ಲೆಯ ಜಗಳೂರಿನ ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದ್ದಾರೆ.
Last Updated : Jan 15, 2021, 12:41 PM IST