ಬಳ್ಳಾರಿ: ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ಬಣವೆಗಳು ಸುಟ್ಟು ಭಸ್ಮವಾಗಿರುವ ಘಟನೆ ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಚೋರುನೂರು ಗ್ರಾಮದಲ್ಲಿ ನಡೆದಿದೆ.
ಚೋರುನೂರು ಗ್ರಾಮದ ಮೂವರು ರೈತರ ಹುರುಳಿ, ಕಡಲೆ, ರಾಗಿ ಹುಲ್ಲು, ಸೊಪ್ಪಿನ ಬಣವೆಗಳು ಸುಟ್ಟು ಭಸ್ಮವಾಗಿವೆ. ಗ್ರಾಮದ ಲಕ್ಕಮ್ಮ ಎಂಬುವರ 2 ಟ್ರ್ಯಾಕ್ಟರ್ ಹುರುಳಿ ಬಣವೆ 8 ಸಾವಿರ ಮೌಲ್ಯ, 4 ಟ್ರ್ಯಾಕ್ಟರ್ ಜೋಳದ ಸೊಪ್ಪಿನ ಬಣವೆ 16 ಸಾವಿರ ಮೌಲ್ಯ, 2 ಟ್ರ್ಯಾಕ್ಟರ್ ಕಡಲೆ ಬಣವೆ 20 ಸಾವಿರ ಮೌಲ್ಯ, 2 ಟ್ರ್ಯಾಕ್ಟರ್ ರಾಗಿ ಹುಲ್ಲು 8 ಸಾವಿರ ಮೌಲ್ಯ ಸೇರಿ ಒಟ್ಟು 52 ಸಾವಿರ ನಷ್ಟವಾಗಿದೆ.
ವಿದ್ಯುತ್ ಶಾರ್ಟ್ ಸರ್ಕ್ಯೂಟ್: ಚೋರುನೂರು ಗ್ರಾಮದಲ್ಲಿ ಬಣವೆಗಳು ಸುಟ್ಟು ಭಸ್ಮ - crop Burning
ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ಚೋರುನೂರು ಗ್ರಾಮದ ಮೂವರು ರೈತರ ಹುರುಳಿ, ಕಡಲೆ, ರಾಗಿ ಹುಲ್ಲು, ಸೊಪ್ಪಿನ ಬಣವೆಗಳು ಸುಟ್ಟು ಭಸ್ಮವಾಗಿವೆ.
![ವಿದ್ಯುತ್ ಶಾರ್ಟ್ ಸರ್ಕ್ಯೂಟ್: ಚೋರುನೂರು ಗ್ರಾಮದಲ್ಲಿ ಬಣವೆಗಳು ಸುಟ್ಟು ಭಸ್ಮ crop Burning in Chorunoor village](https://etvbharatimages.akamaized.net/etvbharat/prod-images/768-512-6781616-595-6781616-1586797885077.jpg)
ಹಾಗೇ ಸಂಡೂರು ತಾಲೂಕಿನ ಚೋರುನೂರು ಗ್ರಾಮದ ರೈತನ ಜೋಳದ ಸೊಪ್ಪೆ 6 ಟ್ರ್ಯಾಕ್ಟರ್ 24 ಸಾವಿರ, ರಾಗಿ ಹುಲ್ಲು 6 ಟ್ರ್ಯಾಕ್ಟರ್ 24 ಸಾವಿರ, ಕಡಲೆ ಹೊಟ್ಟು 3 ಟ್ರ್ಯಾಕ್ಟರ್ 30 ಸಾವಿರ, ಹುರುಳಿ ಹೊಟ್ಟು 2 ಟ್ಯಾಕ್ಟರ್ 20 ಸಾವಿರ, ಮೆಕ್ಕೆಜೋಳ ಹೊಟ್ಟು 4 ಟ್ಯಾಕ್ಟರ್ 16 ಸಾವಿರ ಸೇರಿ ಒಟ್ಟು 1,14,000 ರೂಪಾಯಿ ನಷ್ಟವಾಗಿದೆ. ಗ್ರಾಮದ ರೈತ ರಾಮಪ್ಪ ಎಂಬುವವರ ಮೆಕ್ಕೆಜೋಳ ಸೊಪ್ಪೆ 5 ಟ್ರ್ಯಾಕ್ಟರ್ 20 ಸಾವಿರ, ಮೆಕ್ಕೆಜೋಳ ರವದಿ 3 ಟ್ರ್ಯಾಕ್ಟರ್ 12 ಸಾವಿರ, ಕಡಲೆ ಹೊಟ್ಟು 1 ಟ್ರ್ಯಾಕ್ಟರ್ 10 ಸಾವಿರ ಸೇರಿ ಒಟ್ಟು 42 ಸಾವಿರ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.
ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಕೂಡ್ಲಿಗಿಯ ಅಗ್ನಿ ಶಾಮಕದಳ ಠಾಣಾಧಿಕಾರಿ ಹನುಮಂತ, ಸಿಬ್ಬಂದಿ ಕೆಂಗಪ್ಪ, ಶೇಖರ್ ನಾಯ್ಕ್, ಬಸವರಾಜ್, ಸಂಡೂರಿನ ಅಗ್ನಿ ಶಾಮಕದಳದ ಠಾಣಾಧಿಕಾರಿ ಮಂಜುನಾಥ್, ಸಿಬಂದಿ ಭರ್ಮಪ್ಪ, ರಾಕೆಶ್, ರಮೇಶ್, ಪರಶುರಾಮ ಬೆಂಕಿ ನಂದಿಸಿದ್ದಾರೆ.