ಹೊಸಪೇಟೆ/ಬಳ್ಳಾರಿ:ವಿಜಯನಗರ ಉಪಚುನಾವಣೆಗೆ ಈಗಾಗಲೇ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದೆ.
ಉಪಚುನಾವಣೆ ಮತದಾನ ನಡೆಯುವ ಎಲ್ಲಾ 247 ಮತಗಟ್ಟೆಯ ಅಧಿಕಾರಿಗಳಿಗೆ 3ನೇ ಹಂತದ ತರಬೇತಿಯನ್ನು ನೀಡಲಾಗಿದೆ. ಅಗತ್ಯ ಸಾಮಾಗ್ರಿಗಳ ಜೊತೆಗೆ ಸಕಲ ತಯಾರಿ ಮಾಡಿಕೊಳ್ಳಲಾಗಿದೆ. ಚುನಾವಣೆ ಆಯೋಗದ ನಿಯಮಾನುಸಾರ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಎಸ್ ಎಸ್ ನಕುಲ್ ತಿಳಿಸಿದರು.
ವಿಜಯನಗರ ಉಪಚುನಾವಣೆ ಸಿದ್ಧತೆ.. ನಗರದ ಎಲ್ಎಫ್ ಶಾಲೆಯಲ್ಲಿ ಇಂದು ಜಿಲ್ಲಾಧಿಕಾರಿ ಈ ಕುರಿತು ಮಾಹಿತಿ ನೀಡಿದ್ರು. ವಿಜಯನಗರ ಉಪಚುನಾವಣೆಯ ಮತದಾನ ಗುರುವಾರ ಬೆಳಗ್ಗೆ 7 ಗಂಟೆಗೆ ಆರಂಭವಾಗಿ ಸಂಜೆ 6 ಗಂಟೆಗೆ ಮುಕ್ತಾಯವಾಗಲಿದೆ. ಒಟ್ಟು 247 ಮತಗಟ್ಟೆ ಅಧಿಕಾರಗಳನ್ನು ನೇಮಕ ಮಾಡಲಾಗಿದೆ ಎಂದು ತಿಳಿಸಿದ್ರು. 1 ಸಖಿ ಮತಗಟ್ಟೆಯನ್ನು ಸ್ಪಾಪಿಸಲಾಗಿದೆ. 21 ಸೂಕ್ಷ್ಮ ಮತಗಟ್ಟೆಗಳನ್ನು ಒಳಗೊಂಡಿದೆ. 10 ಮತಗಟ್ಟಿಗಳಿಗೆ ವೆಬ್ ಕಾಸ್ಟಿಂಗ್ ವ್ಯವಸ್ಥೆ ಮಾಡಲಾಗಿದೆ. ಕ್ಷೇತ್ರಕ್ಕೆ ಸಂಬಂಧಿಸಿದ ಉಪಚುನಾವಣೆಯಲ್ಲಿ ಸುಮಾರು 3500 ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ. ಅವರಿಗೆ ಮತದಾನಕ್ಕೆ ತಕ್ಕಂತ ತರಬೇತಿ ನೀಡಲಾಗಿದೆ ಎಂದು ತಿಳಿಸಿದ್ರು.
2 ಕೆಎಸ್ಆರ್ಪಿ, 1 ತೆಲಂಗಾಣ ಮಾದರಿಯ ಪೊಲೀಸ್ ಪಡೆ ಬಳಸಿಕೊಂಡಿದೆ. ಚುನಾವಣಾ ಉದ್ದೇಶದಿಂದ 40 ಕೆಎಸ್ಆರ್ಟಿಸಿ ಬಸ್ಗಳು, 20 ಮಿನಿ ಟೆಂಪೊಗಳನ್ನು ಉಪಯೋಗಿಸಿಕೊಳ್ಳಲಾಗುತ್ತಿದೆ. ಎಲ್ಲಾ ಬೂತ್ಗಳಲ್ಲಿ ಮತದಾನ ಸುಗಮವಾಗಿ ನಡೆಯಲಿದೆ ಎಂದು ಜಿಲ್ಲಾಧಿಕಾರಿ ನಕುಲ್ ವಿಶ್ವಾಸ ವ್ಯಕ್ತಪಡಿಸಿದ್ರು.