ಕರ್ನಾಟಕ

karnataka

ETV Bharat / state

ಶಾಲೆಗಳಲ್ಲಿ ಮುಂಗಡ ಪ್ರವೇಶ ಪರೀಕ್ಷೆ - ಮುಂಗಡ ದಾಖಲಾತಿ ನಿಷಿದ್ಧ: ನಿಯಮ ಉಲ್ಲಂಘಿಸಿದರೆ ಕ್ರಮ - Education Department notice to advance admission News

2021-22ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಮುಂಗಡವಾಗಿ ಪ್ರವೇಶ ಪರೀಕ್ಷೆ ನಡೆಸೋದು ಹಾಗೂ ಇಲಾಖೆಯ ನಿರ್ದೇಶನವಿಲ್ಲದೇ ತರಗತಿಗಳಿಗೆ ಮುಂಗಡ ದಾಖಲಾತಿ ಮಾಡಿಕೊಳ್ಳೋದನ್ನ ನಿಷೇಧಿಸಲಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

Education department
ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ

By

Published : Mar 23, 2021, 11:22 AM IST

ಬಳ್ಳಾರಿ: 2021-22ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಯಾವುದೇ ತರಗತಿಗೆ ಮುಂಗಡವಾಗಿ ಪ್ರವೇಶ ಪರೀಕ್ಷೆ ನಡೆಸೋದನ್ನ ಹಾಗೂ ಇಲಾಖೆಯ ನಿರ್ದೇಶನವಿಲ್ಲದೇ ತರಗತಿಗಳಿಗೆ ಮುಂಗಡ ದಾಖಲಾತಿ ಮಾಡಿಕೊಳ್ಳೋದನ್ನ ನಿಷೇಧಿಸಲಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು (ಆಡಳಿತ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನು ಓದಿ: ಬೀದರ್ ಜಿಲ್ಲೆಯ ಗೊಗ್ಗವ್ವೆ ಕೆರೆಗೆ ಮರುಜೀವ: ಪ್ರಧಾನಿಯಿಂದ ಗ್ರಾಮಸ್ಥರಿಗೆ ಶಹಬ್ಬಾಸ್​ ಗಿರಿ

ಅಂತೆಯೇ ಖಾಸಗಿ ಅನುದಾನ ರಹಿತ ಶಾಲೆಗಳಲ್ಲಿ ಮುಂಗಡವಾಗಿ ವಿದ್ಯಾರ್ಥಿಗಳಿಂದ ಶಾಲಾ - ಶುಲ್ಕವನ್ನು ಪಡೆಯೋದನ್ನ ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ರಾಜ್ಯ ಸರ್ಕಾರದ ಅನುಮತಿ ನೀಡಿದ ನಂತರ ಈ ಪ್ರಕ್ರಿಯೆಗಳನ್ನು ಪ್ರಾರಂಭಿಸಲು ಸೂಚಿಸಲಾಗಿದೆ. ಹಾಗೊಂದು ವೇಳೆ ಇಲಾಖೆಯ ನಿಯಮ ಉಲ್ಲಂಘಿಸಿ ಮುಂಗಡ ದಾಖಲಾತಿ ಮತ್ತು ಮುಂಗಡ ಶುಲ್ಕ ಪಡೆದುಕೊಂಡಲ್ಲಿ ಅಂತಹ ಶಾಲೆಗಳ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲಾಗುವುದೆಂದು ಎಚ್ಚರಿಸಿದ್ದಾರೆ.

ABOUT THE AUTHOR

...view details