ಬಳ್ಳಾರಿ:ಮಾಜಿ ಸಚಿವ ಡಿ.ಕೆ ಶಿವಕುಮಾರ್ ಅವರ ಬೇನಾಮಿ ಆಸ್ತಿ ಎಂದು ಪರಿಗಣಿಸಲಾಗಿರುವಗದ್ದಿಕೇರಿ ಗ್ರಾಮದ ಸೋಲಾರ್ ಪ್ಲಾಂಟ್ಗೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳ ತಂಡ ದಾಳಿ ನಡೆಸಿದ್ದು, ಪರಿಶೀಲನೆ ನಡೆಸಿದೆ.
ಡಿಕೆಶಿ ಬೇನಾಮಿ ಆಸ್ತಿ ವಿಚಾರ: ಗದ್ದಿಕೇರಿ ಸೋಲಾರ್ ಪ್ಲಾಂಟ್ಗೆ ED ಅಧಿಕಾರಿಗಳ ದಾಳಿ
ಬಳ್ಳಾರಿಯ ಹಗರಿಬೊಮ್ಮನಹಳ್ಳಿ ತಾಲೂಕಿನ ಗದ್ದಿಕೇರಿ ಗ್ರಾಮದ ಸೋಲಾರ್ ಪ್ಲಾಂಟ್ಗೆ ಜಾನಿ(ಜಾರಿ ನಿರ್ದೇಶನಾಲಯ) ಅಧಿಕಾರಿಗಳ ತಂಡ ದಾಳಿ ನಡೆಸಿದೆ.
ಗದ್ದಿಕೇರಿ ಸೋಲಾರ್ ಪ್ಲಾಂಟ್
ಡಿಕೆಶಿ ಇಂಧನ ಸಚಿವರಾದಾಗ ಬೇನಾಮಿಯಾಗಿ ಈ ಪ್ಲಾಂಟ್ ನಿರ್ಮಿಸಿದ್ದಾರೆ ಎನ್ನಲಾಗಿದ್ದು ತನಿಖೆ ನಡೆಯುತ್ತಿದೆ. 1,950 ಎಕರೆ ವಿಸ್ತೀರ್ಣದಲ್ಲಿರುವ ಪ್ಲಾಂಟ್ ಇದಾಗಿದ್ದು ಎರಡು ವಾಹನಗಳಲ್ಲಿ ಆಗಮಿಸಿದ ಅಧಿಕಾರಿಗಳ ತಂಡ ತನಿಖೆ ನಡೆಸುತ್ತದೆ ಎಂದು ಮೂಲಗಳು ತಿಳಿಸಿವೆ.