ಮತಗಟ್ಟೆಯ ಮುಂಭಾಗ ವ್ಯಕ್ತಿಗೆ ಡಿವೈಎಸ್ಪಿ ಕಪಾಳಮೋಕ್ಷ : ಲಘು ಲಾಠಿ ಪ್ರಹಾರ - Lathi Charge in Hospete
![ಮತಗಟ್ಟೆಯ ಮುಂಭಾಗ ವ್ಯಕ್ತಿಗೆ ಡಿವೈಎಸ್ಪಿ ಕಪಾಳಮೋಕ್ಷ : ಲಘು ಲಾಠಿ ಪ್ರಹಾರ Lathi Charge in Hospete](https://etvbharatimages.akamaized.net/etvbharat/prod-images/768-512-10055601-thumbnail-3x2-abc.jpg)
11:48 December 30
ಶಾಲೆಯತ್ತ ಜನರು ಆಗಮಿಸಿಲು ಯತ್ನಿಸಿದಾಗ ಜನರನ್ನು ಪೊಲೀಸರು ಚದುರಿಸಲು ಮುಂದಾಗುತ್ತಿದ್ದಂತೆ ಅಸಭ್ಯವಾಗಿ ವರ್ತಿಸಿದ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡರು..
ಹೊಸಪೇಟೆ :ನಗರದ ಲಿಟಲ್ ಫ್ಲವರ್ ಶಾಲೆ ಮುಂಭಾಗ ಗ್ರಾಪಂ ಮತ ಎಣಿಕೆ ನಡೆಯುತ್ತಿದ್ದು, ಪೊಲೀಸರಿಗೆ ಅಸಭ್ಯವಾಗಿ ಮಾತನಾಡಿದ ವ್ಯಕ್ತಿಯನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಡಿವೈಎಸ್ಪಿ ವಿ.ರಘುಕುಮಾರ್ ಅವರು ವ್ಯಕ್ತಿಗೆ ಕಪಾಳಮೋಕ್ಷ ಮಾಡಿ ವಶಕ್ಕೆ ಪಡೆದಿದ್ದಾರೆ.
ಶಾಲೆಯತ್ತ ಜನರು ಆಗಮಿಸಿಲು ಯತ್ನಿಸಿದಾಗ ಜನರನ್ನು ಪೊಲೀಸರು ಚದುರಿಸಲು ಮುಂದಾದರು. ಈ ವೇಳೆ ಅಸಭ್ಯವಾಗಿ ವರ್ತಿಸಿದ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡರು.
ಲಿಟಲ್ ಫ್ಲವರ್ ಶಾಲೆ ಮುಂಭಾಗ ಸಾವಿರಾರು ಜನ ಜಮಾವಣೆಯಾಗಿದ್ದರು. ಸ್ವಲ್ಪ ಸಮಯದ ನಂತರ ಶಾಲೆಯತ್ತ ನುಗ್ಗಲು ಮುಂದಾದರು. ಜನರನ್ನು ಚದುರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು. ಬಳಿಕ ಜನರನ್ನು ನಿಯಂತ್ರಿಸಲು ಪೊಲೀಸರು ಲಘು ಲಾಠಿ ಪ್ರಹಾರ ಮಾಡಿದರು.