ಹೊಸಪೇಟೆ (ಬಳ್ಳಾರಿ):ನಗರದ ಬಳ್ಳಾರಿ ರಸ್ತೆಯ ಹೊರವಲಯದಲ್ಲಿ ಮೋಟಾರ್ ಸ್ಪೋಟ್ಸ್ ಉತ್ಸವದ ಹಂಪಿ ಕಾರ್ ರೇಸ್ಗೆ ಡಿವೈಎಸ್ಪಿ ರಘುಕುಮಾರ್ ಚಾಲನೆ ನೀಡಿದರು.
ಹಂಪಿಯಲ್ಲಿ ಕಾರ್ಗಳ ಸದ್ದು: ರೇಸ್ಗೆ ಡಿವೈಎಸ್ಪಿ ಚಾಲನೆ - ಮೋಟಾರ್ ಸ್ಪೋಟ್ಸ್ ಉತ್ಸವ
ಹೊಸಪೇಟೆ ನಗರದ ಬಳ್ಳಾರಿ ರಸ್ತೆಯ ಹೊರವಲಯದಲ್ಲಿ ಮೋಟಾರ್ ಸ್ಪೋಟ್ಸ್ ಉತ್ಸವದಲ್ಲಿ ನಡೆದ ಹಂಪಿ ಕಾರ್ ರೇಸ್ನಲ್ಲಿ ಕೇರಳ, ಮಹಾರಾಷ್ಟ್ರ, ಮೇಘಾಲಯ, ತಮಿಳನಾಡು, ಆಂಧ್ರಪ್ರದೇಶ ರಾಜ್ಯಗಳ ಒಟ್ಟು 30 ಕ್ರೀಡಾಪಟುಗಳು ಭಾಗವಹಿಸಿದ್ದರು.
ಹಂಪಿ ಕಾರ್ ರೇಸ್ಗೆ ಡಿವೈಎಸ್ಪಿ ರಘುಕುಮಾರ್ ಚಾಲನೆ
ಮೋಟಾರ್ ಸ್ಪೋರ್ಟ್ಸ್ ಅಕಾಡೆಮಿ ಆಫ್ ವಿಜಯನಗರ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕರ್ನಾಟಕ ಪ್ರವಾಸೋದ್ಯಮ ಇಲಾಖೆ, ಜೆ.ಎಸ್.ಡಬ್ಲ್ಯೂ ಸೇರಿದಂತೆ ನಾನಾ ಸಂಸ್ಥೆಗಳು ಜಂಟಿಯಾಗಿ ಈ ಉತ್ಸವವನ್ನು ಆಯೋಜಿಸಿವೆ.
ಮೋಟಾರ್ ಸ್ಪೋಟ್ಸ್ನ 19ನೇ ವಿಭಾಗಲ್ಲಿ ಕಾರ್ ರೇಸ್ ನಡೆದಿದ್ದು, 800 ಸಿಸಿ, 2000 ಸಿಸಿ ವರೆಗಿನ ಕಾರುಗಳು ಸ್ಪರ್ಧೆಗೆ ಇಳಿದಿದ್ದವು. ಇದರಲ್ಲಿ ಕೇರಳ, ಮಹಾರಾಷ್ಟ್ರ, ಮೇಘಾಲಯ, ತಮಿಳನಾಡು, ಆಂಧ್ರಪ್ರದೇಶ ರಾಜ್ಯಗಳ ಒಟ್ಟು 30 ಕ್ರೀಡಾಪಟುಗಳು ಭಾಗವಹಿಸಿದ್ದರು. ಕಾರ್ ರೇಸ್ ನೋಡಲು ನಾನಾ ಭಾಗದ ಜನರು ಆಗಮಿಸಿದ್ದರು.