ಕರ್ನಾಟಕ

karnataka

ETV Bharat / state

ಸಾಹಿತಿ ಭಗವಾನ್ ಮುಖಕ್ಕೆ ಮಸಿ ಬಳಿದ ಘಟನೆ ಖಂಡಿಸಿ ಡಿಎಸ್​ಎಸ್ ಪ್ರತಿಭಟನೆ

ಭಗವಾನ್‌ ಅವರು ನಾಡಿನ ದಲಿತಪರ, ರೈತಪರ, ಕಾರ್ಮಿಕ ಪರ ಮುಂಚೂಣಿಯ ಹೋರಾಟಗಾರರಾಗಿತ್ತಾರೆ. ಮುಂದಿನ ದಿನಗಳಗಳಲ್ಲಿ ಇಂತಹ ಘಟನೆಗಳು ಮರುಕಳಿಸಬಾರದು. ಅವರಿಗೆ ಕರ್ನಾಟಕ ಸರ್ಕಾರ ಸಂಪೂರ್ಣ ರಕ್ಷಣೆ ನೀಡಬೇಕೆಂದು ಅಗ್ರಹಿಸಲಾಯಿತು.

ಸಾಹಿತಿ ಭಗವಾನ್ ಮುಖಕ್ಕೆ ಮಸಿ ಬಳಿದ ಘಟನೆ ಖಂಡಿಸಿ ಡಿಎಸ್​ಎಸ್ ಪ್ರತಿಭಟನೆ
ಸಾಹಿತಿ ಭಗವಾನ್ ಮುಖಕ್ಕೆ ಮಸಿ ಬಳಿದ ಘಟನೆ ಖಂಡಿಸಿ ಡಿಎಸ್​ಎಸ್ ಪ್ರತಿಭಟನೆ

By

Published : Feb 6, 2021, 1:33 AM IST

ಬಳ್ಳಾರಿ:ಪ್ರಗತಿಪರ ಚಿಂತಕ ಪ್ರೊ.ಭಗವಾನ್ ಅವರ ಮುಖಕ್ಕೆ ಮಹಿಳಾ ವಕೀಲೆಯೊಬ್ಬರು ಗುರುವಾರ ಕೋರ್ಟ್​ ಆವರಣದಲ್ಲಿ ಮಸಿ ಬಳಿದಿರುವ ಘಟನೆಯನ್ನು ಖಂಡಿಸಿ‌ ಡಿ.ಜಿ.ಸಾಗರ್ ಬಣದ ದಲಿತ ಸಂಘರ್ಷ ಸಮಿತಿ ಮುಖಂಡರು, ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿಯ ಆವರಣದಲ್ಲಿ ಡಿ.ಜಿ.ಸಾಗರ್ ಬಣದ ದಲಿತ ಸಂಘರ್ಷ ಸಮಿತಿಯ ಸದಸ್ಯರು ಪ್ರತಿಭಟಿಸಿ, ಪ್ರೊ.ಭಗವಾನ್ ಅವರ ಮುಖಕ್ಕೆ ವಿಕೃತ ಮನಸ್ಸಿನ ನ್ಯಾಯವಾದಿ ಮೀರಾ ರಾಘವೇಂದ್ರ ನ್ಯಾಯಾಲದ ಆವರಣದಲ್ಲಿಯೇ ಮಸಿ ಬಳಿದಿದ್ದು ದುರದೃಷ್ಟಕರ ವಿಷಯವಾಗಿದ್ದು, ಕೂಡಲೇ ಆ ಮಹಿಳೆಯನ್ನು ಬಂಧಿಸಬೇಕು. ಅವರ ವಕೀಲ ವೃತ್ತಿಯ ನೋಂದಣಿಯನ್ನು ರದ್ದು ಪಡಿಸಬೇಕು. ಅಲ್ಲದೆ ಕಾನೂನಿನ ಪ್ರಕಾರ ಅವರನ್ನು ಶಿಕ್ಷೆಗೆ ಗುರಿಪಡಿಸಬೇಕೆಂದು ಆಗ್ರಹಿಸಲಾಯಿತು.

ಭಗವಾನ್‌ ಅವರು ನಾಡಿನ ದಲಿತಪರ, ರೈತಪರ, ಕಾರ್ಮಿಕ ಪರ ಮುಂಚೂಣಿಯ ಹೋರಾಟಗಾರರಾಗಿತ್ತಾರೆ. ಮುಂದಿನ ದಿನಗಳಗಳಲ್ಲಿ ಇಂತಹ ಘಟನೆಗಳು ಮರುಕಳಿಸಬಾರದು. ಅವರಿಗೆ ಕರ್ನಾಟಕ ಸರ್ಕಾರ ಸಂಪೂರ್ಣ ರಕ್ಷಣೆ ನೀಡಬೇಕೆಂದು ಅಗ್ರಹಿಸಲಾಯಿತು.

ಪ್ರತಿಭಟನೆಯ ನಂತರ ಮುಖ್ಯ ಮಂತ್ರಿಗಳಿಗೆ ಬರೆದ ಮನವಿ‌ಪತ್ರವನ್ನು‌ ಜಿಲ್ಲಾಡಳಿತಕ್ಕೆ ಸಂಘಟನೆಯ ರಾಜ್ಯ ಸಂಘಟನಾ ಸಂಚಾಲಕ ಎ.ಮಾನಯ್ಯ, ಜಿಲ್ಲಾ ಸಂಚಾಲಕ ಹೆಚ್.ಸಿದ್ದೇಶ್, ಮೊದಲಾದವರು ಸಲ್ಲಿಸಿದರು. ಈ ಸಮಯದಲ್ಲಿ ಸಂಘಟನೆ ಸಂಚಾಲಕ ಹೆಚ್.ಆಂಜನೇಯ, ಖಜಾಂಜಿ ಜಿ.ಗಾದಿಲಿಂಗ, ಜಿಲ್ಲಾ ವಿದ್ಯಾರ್ಥಿ ಒಕ್ಕೂಟದ ಸಂಚಾಲಕ ಬಿ. ರಮೇಶ್, ಸಂಘಟನಾ ಸಂಚಾಲಕರು, ಟಿ.ಎಂ. ಎರ್ರಿಸ್ವಾಮಿ ಮೊದಲಾದವರು ಇದ್ದರು.

ABOUT THE AUTHOR

...view details