ಬಳ್ಳಾರಿ: ಕುಡಿದ ಅಮಲಿನಲ್ಲಿ ರೈಲು ಹಳಿ ಮೇಲೆ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿ ರೈಲಿಗೆ ಸಿಲುಕಿ ಸಾವಿಗೀಡಾಗಿದ್ದಾನೆ.
ಕುಡಿದ ಮತ್ತಿನಲ್ಲಿ ಹಳಿ ಮೇಲೆ ಪಯಣ : ರೈಲು ಡಿಕ್ಕಿ ಹೊಡೆದು ವ್ಯಕ್ತಿ ಸ್ಥಳದಲ್ಲೇ ಸಾವು - bellary latest news
ವ್ಯಕ್ತಿಯೋರ್ವ ಮದ್ಯಪಾನ ಮಾಡಿ ನಿನ್ನೆ ರೈಲ್ವೆ ಗೇಟ್ನಲ್ಲಿ ನಡೆದುಕೊಂಡು ಹೋಗುವಾಗ ರೈಲು ಡಿಕ್ಕಿ ಹೊಡೆದಿದೆ. ಪರಿಣಾಮ ತಲೆಗೆ ತೀವ್ರ ಪೆಟ್ಟಾಗಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ.
![ಕುಡಿದ ಮತ್ತಿನಲ್ಲಿ ಹಳಿ ಮೇಲೆ ಪಯಣ : ರೈಲು ಡಿಕ್ಕಿ ಹೊಡೆದು ವ್ಯಕ್ತಿ ಸ್ಥಳದಲ್ಲೇ ಸಾವು Drunken man dies in bellary](https://etvbharatimages.akamaized.net/etvbharat/prod-images/768-512-7324335-thumbnail-3x2-viji.jpg)
ರೈಲು ಡಿಕ್ಕಿ
ನಗರದ ರೇಡಿಯೋ ಪಾರ್ಕ್ ನಿವಾಸಿ ಶ್ರೀರಾಮಬಾಬು( 63 ವರ್ಷ) ಮೃತ ವ್ಯಕ್ತಿ. ಮದ್ಯಪಾನ ಮಾಡಿ ನಿನ್ನೆ ರೈಲ್ವೆ ಗೇಟ್ನಲ್ಲಿ ನಡೆದುಕೊಂಡು ಹೋಗುವಾಗ ರೈಲು ಡಿಕ್ಕಿ ಹೊಡೆದಿದೆ. ಪರಿಣಾಮ ತಲೆಗೆ ತೀವ್ರ ಪೆಟ್ಟಾಗಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ.
ಲಾಕ್ಡೌನ್ ಸಡಲಿಕೆ ನಂತರ ಈತ ಅತಿಯಾಗಿ ಮದ್ಯಪಾನ ಮಾಡುತ್ತಿದ್ದ ಎನ್ನಲಾಗಿದೆ. ಸ್ಥಳಕ್ಕೆ ರೈಲ್ವೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.