ಕರ್ನಾಟಕ

karnataka

ETV Bharat / state

ಬಳ್ಳಾರಿಯಲ್ಲಿ ತಾಲೂಕು ಮಟ್ಟದ ಸುಸ್ಥಿರ ಅಭಿವೃದ್ಧಿ ತರಬೇತಿಗೆ ಚಾಲನೆ - ತಾಲೂಕು ಮಟ್ಟದ ಸುಸ್ಥಿರ ಅಭಿವೃದ್ಧಿ

ಬಳ್ಳಾರಿ ಜಿಲ್ಲೆಯ ವಿವಿಧ ಇಲಾಖೆಗಳ 'ಸಿ' ವೃಂದದ ಸಿಬ್ಬಂದಿಗೆ ಸುಸ್ಥಿರ ಅಭಿವೃದ್ದಿ ಗುರಿಗಳ ಬಗ್ಗೆ ಒಂದು ದಿನದ ತರಬೇತಿ ಕಾರ್ಯಕ್ರಮ ನಡೆಸಲಾಯಿತು.

Taluk Level Sustainable Development Training
ತಾಲೂಕು ಮಟ್ಟದ ಸುಸ್ಥಿರ ಅಭಿವೃದ್ಧಿ

By

Published : Feb 19, 2020, 4:52 AM IST

ಬಳ್ಳಾರಿ: ಜಿಲ್ಲಾ ಆಡಳಿತ ತರಬೇತಿ ಸಂಸ್ಥೆ ಮತ್ತು ಜಿಲ್ಲಾಡಳಿತ ವತಿಯಿಂದ ಗುಗ್ಗರಹಟ್ಟಿಯಲ್ಲಿ ತಾಲೂಕು ಮಟ್ಟದ ಸುಸ್ಥಿರ ಅಭಿವೃದ್ದಿ ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಜಿಲ್ಲೆಯ ವಿವಿಧ ಇಲಾಖೆಗಳ 'ಸಿ' ವೃಂದದ ಸಿಬ್ಬಂದಿಗೆ ಸುಸ್ಥಿರ ಅಭಿವೃದ್ದಿ ಗುರಿಗಳ ಬಗ್ಗೆ ಒಂದು ದಿನದ ತರಬೇತಿ ಕಾರ್ಯಕ್ರಮ ನಡೆಸಲಾಯಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಅಂಕಿಸಂಖ್ಯೆ ಸಂಗ್ರಹಣಾಧಿಕಾರಿ ವಾಗೀಶ್, ಕೇಂದ್ರ ಸರ್ಕಾರವು ಗ್ರಾಮಮಟ್ಟದಿಂದ- ರಾಜ್ಯಮಟ್ಟದವರೆಗೆ 2020-30ರ ಒಳಗೆ ಸುಸ್ಥಿರ ಅಭಿವೃದ್ಧಿಯ 17 ಗುರಿಗಳನ್ನು ತಲುಪುವ ಯೋಜನೆ ಹಾಕಿಕೊಂಡಿದೆ. ಅವುಗಳಲ್ಲಿ ಮುಖ್ಯವಾಗಿ ಹಸಿವು ಮುಕ್ತ, ಉತ್ತಮ ಆರೋಗ್ಯ ಮತ್ತು ಜೀವನ, ಗುಣಮಟ್ಟದ ಶಿಕ್ಷಣ, ಲಿಂಗ ಸಮಾನತೆ ಮತ್ತು ಸ್ವಚ್ಛ ನೀರು ಹಾಗೂ ನೈರ್ಮಲ್ಯದಂತಹ ಅಂಶಗಳು ಸೇರಿವೆ ಎಂದರು.

ನುರಿತ ಸಂಪನ್ಮೂಲ ವ್ಯಕ್ತಿಗಳು ಹಾಗೂ ಜಿಲ್ಲಾ ತರಬೇತಿ ಸಂಸ್ಥೆಯ ಬೋಧಕರುಗಳಾದ ಎಂ. ಲೋಕೇಶ್, ಮಂಜುಳಾ ಮಾಳ್ಗಿ, ಟಿ. ವನಜಾ ಅವರು ಸುಸ್ಥಿರ ವಿಷಯದ ಕುರಿತು ವಿಶ್ಲೇಷಣೆ ಮಾಡಿದರು. ತರಬೇತಿಯಲ್ಲಿ ಪ್ರಾಚಾರ್ಯರಾದ ಎಸ್.ಸುರೇಶ್ ಬಾಬು, ಮೈಸೂರಿನ ಸಿಬ್ಬಂದಿ ಮತ್ತು ಆಡಳಿತ ತರಬೇತಿ ಸಂಸ್ಥೆಯ ಡಾ.ವೆಂಕಟೇಶ್, ಪ್ರಭು, ಶ್ರೀಧರ, ಗ್ರಾಮೀಣಾ ಅಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿ ಇದ್ದರು.

ABOUT THE AUTHOR

...view details