ಬಳ್ಳಾರಿ:ಇಲ್ಲಿನ ಮಹಾನಗರ ಪಾಲಿಕೆ ವ್ಯಾಪ್ತಿಯ ಬಂಡಿಹಟ್ಟಿ ಪ್ರದೇಶದ ರಾಮನಗರದ ನಿವಾಸಿಗಳಿಗೆ ಒಳಚರಂಡಿ ನೀರು ಮಿಶ್ರಿತ ಕುಡಿವ ನೀರು ಪೂರೈಕೆಯಾಗುತ್ತಿರುವುದು ಬೆಳಕಿಗೆ ಬಂದಿದೆ.
ಕೆಂಪು ಬಣ್ಣಕ್ಕೆ ತಿರುಗಿದ ಕುಡಿಯುವ ನೀರು: ಪಾಲಿಕೆ ವಿರುದ್ಧ ಆಕ್ರೋಶ - Bellary Metropolitan Policy
ಇಲ್ಲಿನ ರಾಮನಗರ ನಿವಾಸಿಗಳಿಗೆ ಸರಬರಾಜಾಗುತ್ತಿರುವ ನೀರಿನಲ್ಲಿ ಒಳಚರಂಡಿ ನೀರು ಮಿಶ್ರಿತವಾಗಿದೆ ಎಂದು ನಿವಾಸಿಗಳು ಆರೋಪಿಸಿದ್ದಾರೆ.
ಜನರಿಗೆ ನಿತ್ಯ ಸರಬರಾಜಾಗುತ್ತಿರುವ ನೀರು ಕೆಂಪು ಬಣ್ಣಕ್ಕೆ ತಿರುಗಿದ್ದು ದುರ್ವಾಸನೆಯಿಂದ ಕೂಡಿದೆ. ಇದನ್ನೇ ಕೆಲವರು ಶುದ್ಧೀಕರಿಸಿ ಕುಡಿದರೆ, ಇನ್ನೂ ಕೆಲವರು ವಿಧಿಯಿಲ್ಲದೆ ಇದೇ ನೀರನ್ನು ಹಾಗೆಯೇ ಬಳಸುತ್ತಿದ್ದಾರೆ. ಹತ್ತು ಹಲವು ಬಾರಿ ಅಧಿಕಾರಿಗಳಿಗೆ ಈ ಕುರಿತು ದೂರು ನೀಡಿದರೂ ಯಾವೊಬ್ಬ ಅಧಿಕಾರಿ ಸಹ ಈ ಬಗ್ಗೆ ಗಮನ ಹರಿಸಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಕೋವಿಡ್ ನಡುವೆ ಶುದ್ಧೀಕರಿಸಿದ ಬಿಸಿ ನೀರನ್ನೇ ಕುಡಿಯಿರಿ ಎಂದು ಪಾಲಿಕೆ ಜನರಿಗೆ ಅರಿವು ಮೂಡಿಸುತ್ತಿದ್ದಾರೆ. ಆದರೆ ಅವರೇ ಈಗ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಸ್ಥಳಿಯರು ಅಸಮಾಧಾನ ಹೊರಹಾಕಿದ್ದಾರೆ.