ಬಳ್ಳಾರಿ: ಬಳ್ಳಾರಿಯ ಮಹಾನಗರ ಪಾಲಿಕೆ ವ್ಯಾಪ್ತಿಯ ಡಾ.ರಾಜ್ (ಅನಂತಪುರ)ರಸ್ತೆಯಲ್ಲಿರೋ ಒಳಚರಂಡಿ ನೀರಿನ ಶುದ್ಧೀಕರಣ ಘಟಕ ಸದ್ಯ ಅವ್ಯವಸ್ಥೆಯ ಆಗರವಾಗಿದೆ.
ರಾಜ್ಯ ಪ್ರಶಸ್ತಿ ಮುಡಿಗೇರಿಸಿಕೊಂಡ ಈ ಒಳಚರಂಡಿ ನೀರಿನ ಶುದ್ಧೀಕರಣ ಘಟಕ ಹೇಗಿದೆ ಗೊತ್ತಾ? - ಬಳ್ಳಾರಿಯಲ್ಲಿ ಒಳಚರಂಡಿ ನೀರಿನ ಶುದ್ಧೀಕರಣ ಘಟಕದ ಅವ್ಯವಸ್ಥೆ
ಬಳ್ಳಾರಿಯ ಮಹಾನಗರ ಪಾಲಿಕೆ ವ್ಯಾಪ್ತಿಯ ಒಳಚರಂಡಿ ನೀರಿನ ಶುದ್ಧೀಕರಣ ಘಟಕದ ಸದ್ಯ ಅವ್ಯವಸ್ಥೆಯಿಂದ ಕೂಡಿದೆ.
ಅಂದಾಜು 53 ಎಕರೆ ಪ್ರದೇಶ ವ್ಯಾಪ್ತಿಯ ವಿಸ್ತೀರ್ಣ ಹೊಂದಿರುವ ಈ ಘಟಕ ಅಸುರಕ್ಷತೆ ಹಾಗೂ ಅಭದ್ರತೆಯಿಂದ ಕೂಡಿದೆ. ಘಟಕದ ಕೊನೆಯ ಭಾಗದಲ್ಲಿ ಅಂದ್ರೆ, ಒಳಚರಂಡಿ ನೀರು ಸಂಗ್ರಹಣೆಯಾಗುವ ಜಾಗದಲ್ಲಿ ದುರ್ವಾಸನೆ ಮೂಗಿಗೆ ರಾಚುತ್ತದೆ. ಅಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗೆ ಮಾಸ್ಕ್ ಸೇರಿದಂತೆ ಇನ್ನಿತರ ಯಾವುದೇ ಸುರಕ್ಷಿತ ಪರಿಕರಗಳೂ ಕೂಡ ಇಲ್ಲ.
ಅಲ್ಲದೇ, ಮೇಲ್ಭಾಗದ ಘಟಕಗಳಿಗೆ ಬಂದ್ರೆ ಕಾಂಕ್ರಿಟ್ನಿಂದ ನಿರ್ಮಿಸಲಾದ ಬ್ರಿಡ್ಜ್ ಅಂತೂ ಸಂಪೂರ್ಣ ಬಿರುಕು ಬಿಟ್ಟಿದೆ. ಕಬ್ಬಿಣದ ರಾಡ್ಗಳು ಪಿಲ್ಲರ್ಗಳಿಂದ ಹೊರಬಂದಿವೆ. ಅಲ್ಲದೇ, ಆ ಬ್ರಿಡ್ಜ್ ಮೇಲೆ ಓಡಾಡಿದ್ರೆ ಪ್ರಾಣಾಪಾಯದ ಅನುಭವ ಆಗುತ್ತೆ. ಒಳಚರಂಡಿ ನೀರಿನ ಶುದ್ಧೀಕರಣ ಘಟಕಕ್ಕೆ ಅಳವಡಿಸಿದ್ದ ಮೋಟಾರ್ಗಳ ಬಾಯಿ ಬಹುತೇಕ ತೆರೆದುಕೊಂಡಿವೆ. ಆ ಮೋಟಾರ್ ಗಳ ವಿದ್ಯುತ್ ವಾಹಕಗಳು ಹೊರಗಡೆ ಬಿದ್ದಿದೆ. ವಿಪರ್ಯಾಸ ಅಂದ್ರೆ ಒಳಚರಂಡಿ ನೀರಿನ ಶುದ್ಧೀಕರಣದಿಂದ ಆದಾಯದ ಮೂಲ ಹೆಚ್ಚಳದ ಹಿನ್ನೆಲೆ ಈ ಘಟಕ ರಾಜ್ಯ ಸರ್ಕಾರದ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿದೆ. ಕೇವಲ ಒಳಚರಂಡಿ ನೀರಿನ ಶುದ್ಧೀಕರಣ ಘಟಕದಿಂದ ಆದಾಯದ ಮೂಲ ಹೆಚ್ಚಳವನ್ನೇ ಗುರುತಿಸಿದ ಪಾಲಿಕೆ ಆಯುಕ್ತರು ಆ ಘಟಕದ ಸುರಕ್ಷಿತೆ ಹಾಗೂ ಭದ್ರತೆಗೆ ಯಾವುದೇ ಕ್ರಮ ಕೈಗೊಳ್ಳದಿರೋದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.