ಬಳ್ಳಾರಿ:ಬ್ರೆಜಿಲ್ ವಿಶ್ವ ವ್ಯಾಪಾರ ಸಂಘಟನೆಯಲ್ಲಿ ಭಾರತದ ಕಬ್ಬು ಬೆಳೆಗಾರರ ಮೇಲೆ ದಾಳಿ ಮಾಡುತ್ತಿರುವುದರಿಂದ 2020 ರ ಗಣರಾಜ್ಯ ದಿನಕ್ಕೆ ಮುಖ್ಯ ಅತಿಥಿಯಾಗಿ ಬೊಲ್ಸೊನಾರೊ ಆಹ್ವಾನಿಸುವ ನಿರ್ಧಾರ ಹಿಂತೆಗೆದುಕೊಳ್ಳಬೇಕು ಎಂದು ಪ್ರಧಾನಿ ನರೇಂದ್ರ ಮೋದಿಗೆ ಪತ್ರದ ಮೂಲಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಬಿ.ಗೋಣಿಬಸಪ್ಪ ಆಗ್ರಹಿಸಿದ್ದಾರೆ.
ಬ್ರೆಜಿಲ್ ಅಧ್ಯಕ್ಷರನ್ನ ಗಣರಾಜ್ಯ ದಿನಕ್ಕೆ ಅತಿಥಿಯಾಗಿ ಕರೀಬೇಡಿ.. ಈ ಒತ್ತಾಯ ಮಾಡಿದ್ಯಾರು ಗೊತ್ತಾ? - State Farmers Association and Green Army
ಬಳ್ಳಾರಿ ಜಿಲ್ಲೆಯಲ್ಲಿ ಐಎಸ್ಆರ್ ಮತ್ತು ಕಂಪ್ಲಿ ಕಾರ್ಖಾನೆಗಳು ಸಂಪೂರ್ಣವಾಗಿ ಮುಚ್ಚಿ ಹೋಗಿವೆ. ಆದಷ್ಟು ಬೇಗ ಕಾರ್ಖಾನೆ ಪುನಃ ಆರಂಭಿಸಬೇಕು ಎಂದು ಸರ್ಕಾರಕ್ಕೆ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಒತ್ತಾಯಿಸಿದ್ದಾರೆ.
ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಆವರಣದಲ್ಲಿ ಮಾತನಾಡಿದ ಬಿ.ಗೋಣಿಬಸಪ್ಪ, ಬ್ರೆಜಿಲ್ ಅಧ್ಯಕ್ಷ ಬೆಲ್ಸೊನಾರೋ ಭಾರತದ ಎಫ್ಎಲ್ಪಿ ದರವನ್ನು ಕೊಡಬಾರದು ಎಂದು ಡಬ್ಲ್ಯೂಟಿಒನಲ್ಲಿ ದೂರು ದಾಖಲು ಮಾಡಿದ್ದಾರೆ. ಇದರಿಂದ ಕಬ್ಬು ಬೆಳೆಗಾರರಿಗೆ ಮತ್ತು ಕೈಗಾರಿಕೆಯಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಸಂಪೂರ್ಣವಾಗಿ ಹೊಡೆತ ಬೀಳುತ್ತದೆ. ಜಿಲ್ಲೆಯಲ್ಲಿ ಐ.ಎಸ್.ಆರ್ ಮತ್ತು ಕಂಪ್ಲಿ ಕಾರ್ಖಾನೆಗಳು ಸಂಪೂರ್ಣವಾಗಿ ಮುಚ್ಚಿ ಹೋಗಿವೆ. ಆದಷ್ಟು ಬೇಗ ಕಾರ್ಖಾನೆಯನ್ನು ಪುನಃ ಆರಂಭ ಮಾಡಬೇಕೆಂದು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ನಂತರ ಮಾತನಾಡಿದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಎಲ್.ಕೆ ನಾಯ್ಡು, ದೇಶನೂರು, ಹೊಸಪೇಟೆ ಕಾರ್ಖಾನೆಗಳನ್ನು ಪುನಃ ಆರಂಭಿಸಬೇಕು. ರೈತರು ಬೆಳೆದ ಕಬ್ಬು ಮಾರಾಟಕ್ಕಿಂತ ಸಾರಿಗೆ ವೆಚ್ಚ ಖರ್ಚು ಹೆಚ್ಚಾಗುತ್ತಿದೆ. ಅದನ್ನು ತಪ್ಪಿಸಿ ಹೊಸ ತಂತ್ರಜ್ಞಾನ ಬಳಸಿ ರೈತರಿಗೆ ಅನುಕೂಲ ಮಾಡಿಕೊಂಡಬೇಕೆಂದು ಮನವಿ ಮಾಡಿದರು.
TAGGED:
ರೈತ ಸಂಘ ಹಾಗೂ ಹಸಿರು ಸೇನೆ