ಹೊಸಪೇಟೆ : ರಾಜಕೀಯ ಮುಖಂಡರ ಹೇಳಿಕೆಗಳು ಸಮುದಾಯದ ಜನರ ಮೇಲೆ ದುಷ್ಪರಿಣಾಮ ಬೀರದಂತೆ ಹೇಳಿಕೆ ನೀಡಬೇಕು ಎಂದು ಸಚಿವ ಶ್ರೀರಾಮುಲು ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಲ್ಲಿ ಎಸ್ಟಿ ಮೋರ್ಚಾದ ಅಧ್ಯಕ್ಷ ರಾಜುಗೌಡ ಮನವಿ ಮಾಡಿದರು.
ರಾಜಕೀಯ ನಾಯಕರು ಸಮುದಾಯದ ಬಗ್ಗೆ ಟೀಕೆ ಮಾಡಬೇಡಿ: ರಾಜುಗೌಡ - ಹೊಸಪೇಟೆಯಲ್ಲಿ ರಾಜುಗೌಡ ಪತ್ರಿಕಾಗೋಷ್ಠಿ
ರಾಜಕೀಯ ನಾಯಕರು ಸಮುದಾಯ ಹಾಗೂ ಸಮಾಜವನ್ನು ನಿಂದಿಸಿ ಹೇಳಿಕೆಗಳನ್ನು ನೀಡಬಾರದು ಎಂದು ಬಿಜೆಪಿ ಎಸ್ಟಿ ಮೋರ್ಚಾದ ಅಧ್ಯಕ್ಷ ರಾಜುಗೌಡ ಸಿದ್ದರಾಮಯ್ಯ ಹಾಗೂ ಶ್ರೀರಾಮುಲುಗೆ ಮನವಿ ಮಾಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ರಾಜುಗೌಡ
ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ನಡೆಸಿದ ಅವರು, ಸಮಾಜಕ್ಕೆ ಮತ್ತು ಸಮುದಾಯಕ್ಕೆ ನೋವು ಆಗುವಂತಹ ಹಾಗೂ ಶಾಂತಿ ಭಂಗ ತರುವಂತ ಹೇಳಿಕೆ ನೀಡಬಾರದು. ಇದರಿಂದ ಕುರುಬ ಹಾಗೂ ವಾಲ್ಮೀಕಿ ಸಮಾಜದ ಜನರು ಅಪಾಯಕ್ಕೆ ಸಿಲುಕುತ್ತಿದ್ದಾರೆ ಎಂದರು.