ಕರ್ನಾಟಕ

karnataka

ETV Bharat / state

ಕನ್ನಡ ವಿವಿಗೆ ಡಿಎಂಎಫ್​​​ನಿಂದ ₹10 ಕೋಟಿ ಅನುದಾನ.. ಡಿಸಿಎಂ ಅಶ್ವತ್ಥ್ ನಾರಾಯಣ್ - ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥ್​​​ ನಾರಾಯಣ

ಕನ್ನಡ ವಿಶ್ವವಿದ್ಯಾಲಯದಲ್ಲಿ ಮಾತನಾಡಿದ ಅವರು, ಬೋಧಕ, ಬೋಧಕೇತರ ಸಿಬ್ಬಂದಿ ವೇತನ ಸಮಸ್ಯೆಯನ್ನು ಶೀಘ್ರ ಹೋಗಲಾಡಿಸಲಾಗುವುದು. ವಿವಿಗೆ ಬೇಸಿಗೆ ಸಂದರ್ಭದಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ಪರಿಹರಿಸಲಾಗುವುದು..

Higher Education Minister Dr. Ashwathth Narayana
ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥ್​​​ ನಾರಾಯಣ

By

Published : Nov 10, 2020, 7:53 PM IST

ಹೊಸಪೇಟೆ (ಬಳ್ಳಾರಿ): ಕನ್ನಡ ವಿವಿ ಅಭಿವೃದ್ಧಿಗೆ ಜಿಲ್ಲಾ‌ ಖನಿಜ‌ ನಿಧಿ(ಡಿಎಂಎಫ್)ಯಿಂದ 10 ಕೋಟಿ ರೂ. ಅನುದಾನ ನೀಡಲಾಗುವುದು. ‌ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಆನಂದ ಸಿಂಗ್ ಒಪ್ಪಿಗೆ ಸೂಚಿಸಿದ್ದಾರೆ ಎಂದು ಉಪಮುಖ್ಯಮಂತ್ರಿ ಹಾಗೂ ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥ್​​​ ನಾರಾಯಣ ಮಾಹಿತಿ ನೀಡಿದ್ದಾರೆ.

ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥ್​​​ ನಾರಾಯಣ

ಕನ್ನಡ ವಿಶ್ವವಿದ್ಯಾಲಯದಲ್ಲಿ ಮಾತನಾಡಿದ ಅವರು, ಬೋಧಕ, ಬೋಧಕೇತರ ಸಿಬ್ಬಂದಿ ವೇತನ ಸಮಸ್ಯೆಯನ್ನು ಶೀಘ್ರ ಹೋಗಲಾಡಿಸಲಾಗುವುದು. ವಿವಿಗೆ ಬೇಸಿಗೆ ಸಂದರ್ಭದಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ಪರಿಹರಿಸಲಾಗುವುದು. ವಿವಿಯು 750 ಎಕೆರೆ ವ್ಯಾಪ್ತಿ ಹೊಂದಿದೆ. ಇದಕ್ಕೆ ಕಾಂಪೌಂಡ್ ನಿರ್ಮಿಸುವ ಉದ್ದೇಶವನ್ನು ಹೊಂದಲಾಗಿದೆ ಎಂದರು.

ABOUT THE AUTHOR

...view details