ಬಳ್ಳಾರಿ:ಡಿ.ಕೆ. ಶಿವಕುಮಾರ್ ಕಾಂಗ್ರೆಸ್ ಪಕ್ಷದ ಶಿಸ್ತಿನ ಸಿಪಾಯಿ, ಯಾವುದೇ ಆರ್ಥಿಕ ಅಪರಾಧ ಮಾಡಿಲ್ಲ ಮತ್ತು ಕಾನೂನು ಹೋರಾಟದಲ್ಲಿ ಪಕ್ಷ ಡಿಕೆಶಿ ಜೊತೆಗೆ ಇದೆ ಎಂದು ಬಳ್ಳಾರಿ ಜಿಲ್ಲೆಯ ಮಾಜಿ ಸಂಸದ ವಿ.ಎಸ್ ಉಗ್ರಪ್ಪ ತಿಳಿಸಿದರು.
ಬಳ್ಳಾರಿಯಲ್ಲಿ ಮಾಜಿ ಸಂಸದ ಉಗ್ರಪ್ಪ ಮಾತನಾಡಿದರು. ನಗರದ ಹೊರವಲಯದ ಕಾಂಗ್ರೆಸ್ ಪಕ್ಷದ ಜಿಲ್ಲಾ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರದ ಬಿಜೆಪಿ ಪಕ್ಷವು ತನಿಖಾ ಸಂಸ್ಥೆಯನ್ನು ದುರ್ಬಳಕೆ ಮಾಡುತ್ತಿದೆ. ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಾಗ ಯಾವುದೇ ಕಾರಣಕ್ಕೂ ಈ ರೀತಿಯ ದುರ್ಬಳಕೆ ಮಾಡಿಕೊಂಡಿಲ್ಲ ಎಂದರು.
ಸಿಬಿಐಗೆ ಬಿಜೆಪಿ ಪಕ್ಷದ ಅನೇಕ ಪ್ರಕರಣಗಳನ್ನು ನೀಡಿದ್ದೇವೆ. ಅದರಲ್ಲೂ ಸಿಬಿಐ ದುರ್ಬಳಕೆ ಮಾಡಿಕೊಂಡು ಪ್ರಹ್ಲಾದ್ ಜೋಷಿಯ ತಮ್ಮನ ಪ್ರಕರಣ, ಯಡಿಯೂರಪ್ಪ, ಅಮಿತ್ ಶಾ ಪ್ರಕರಣಗಳನ್ನು ಮುಚ್ಚಿಹಾಕಲಾಗಿದೆ ಎಂದು ಆರೋಪಿಸಿದರು.
ವಾದ್ರಾ, ಚಿದಂಬರಂ ಮತ್ತು ಡಿಕೆಶಿ ಅವುರುಗಳನ್ನು ಸಿಕ್ಕಿಹಾಕಿಸಿದ್ದಾರೆ. 2007ರ ಚಿದಂಬರಂ ಪ್ರಕರಣದಲ್ಲಿ ಈಗ ಚಾರ್ಚ್ ಶೀಟ್ ಹಾಕಿದ್ದಾರೆ. ಡಿಕೆಶಿ ಮೇಲೆ ಸೂಮೋಟೊ ಕೇಸ್ ಮಾಡಿ ಸಿಲುಕಿಸುತ್ತಿದ್ದಾರೆ. ಸದನದಲ್ಲಿ ಶಾಸಕ ಶ್ರೀನಿವಾಸ ಐದು ಕೋಟಿ ಹಣ ಕೋಡೋಕೆ ಬಂದಿದ್ದರು ಎಂದು ಹೇಳಿದ್ದರು. ಯಡಿಯೂರಪ್ಪ ಆಡಿಯೋ ಪ್ರಕರಣ ಬಿಡುಗಡೆ ಪ್ರಕರಣ ಏನಾಗಿದೆ ಸ್ವಾಮಿ. ಈ ಬಗ್ಗೆ ಸಿಬಿಐ ಏನು ಮಾಡುತ್ತಿದೆ, ಡಿಕೆಶಿ ಯಾವುದೇ ಅಪರಾಧ ಎಸಗಿಲ್ಲ. ಇದೆಲ್ಲವೂ ರಾಜಕೀಯ ಪ್ರೇರಿತ ಕೃತ್ಯವಾಗಿದೆ ಎಂದು ಉಗ್ರಪ್ಪ ದೂರಿದರು.
ನಾಲಾಯಕ್ಗಳಿಗೆ ಮಂತ್ರಿಗಿರಿ:
ನಿತ್ಯ ಬೆಳಿಗ್ಗೆ ಬಿಜೆಪಿ ಪಕ್ಷದವರು ಆರ್.ಎಸ್. ಎಸ್ ಶಾಖೆಗೆ ಹೋಗಿ ನಮಸ್ತೆ ಸದವಸ್ಸಲೇ ಮಾತೃಭೂಮಿ ಎಂದು ಹೇಳುತ್ತಾರೆ. ಆದರೆ, ಅವರುಗಳು ಮಂತ್ರಿಗಳಾಗಲು ನಾಲಾಯಕ್. ಪಕ್ಷಕ್ಕೆ ದುಡಿದ ಹಿರಿಯರು ಮಂತ್ರಿಗಳಾಗಿಲ್ಲ. ಈಗ ಮಂತ್ರಿಗಳಾಗಿರುವವರು ಕಾಂಗ್ರೆಸ್ ಮತ್ತು ಜೆಡಿಎಸ್ನಿಂದ ಹೋಗಿದ್ದವರೇ ಎಂದು ವ್ಯಂಗ್ಯವಾಡಿದರು.