ಕರ್ನಾಟಕ

karnataka

ETV Bharat / state

ಅಖಂಡ ಬಳ್ಳಾರಿ ಜಿಲ್ಲೆ ವಿಭಜನೆಗೆ ರವಿಕೃಷ್ಣಾ ರೆಡ್ಡಿ ಆಕ್ಷೇಪ - KRS party President Ravi Krishna Reddy

ಸರ್ಕಾರ ಕೇವಲ ಬಳ್ಳಾರಿ ಜಿಲ್ಲೆಯನ್ನೇ ಗುರಿಯಾಗಿಸಿಕೊಂಡು ವಿಭಜನೆ ಮಾಡಿರೋದು ತರವಲ್ಲ ಎಂದು ಸಾಮಾಜಿಕ ಹೋರಾಟಗಾರ ರವಿಕೃಷ್ಣಾ ರೆಡ್ಡಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

bellary
ರವಿಕೃಷ್ಣಾ ರೆಡ್ಡಿ

By

Published : Dec 7, 2020, 2:33 PM IST

Updated : Dec 7, 2020, 3:26 PM IST

ಬಳ್ಳಾರಿ:ಅಖಂಡ ಬಳ್ಳಾರಿ ಜಿಲ್ಲೆ ವಿಭಜನೆ ಉದ್ದೇಶ ಪೂರ್ವಕವಾದದ್ದು ಎಂದು ಸಾಮಾಜಿಕ ಹೋರಾಟಗಾರ ರವಿಕೃಷ್ಣಾ ರೆಡ್ಡಿ ಆರೋಪಿಸಿದ್ದಾರೆ.

ಸಾಮಾಜಿಕ ಹೋರಾಟಗಾರ ರವಿಕೃಷ್ಣಾ ರೆಡ್ಡಿ

ನಗರದ ಡಿಸಿ ಕಚೇರಿಯ ಮುಂಭಾಗದಲ್ಲಿಂದು ಆಯೋಜಿಸಿದ್ದ ಸೈಕಲ್ ಜಾಥಾದ ಸಮಾರೋಪ ಸಮಾರಂಭದಲ್ಲಿ ಭಾಗಿಯಾಗುವ ಮುನ್ನ ಈಟಿವಿ ಭಾರತದೊಂದಿಗೆ ಮಾತನಾಡಿದ ಅವರು, ನೂತನ ವಿಜಯನಗರ ಜಿಲ್ಲೆ ಘೋಷಣೆ ಮಾಡಿರೋದು ರಾಜ್ಯ ಸರ್ಕಾರದ ಹಾಗೂ ಸಚಿವ ಆನಂದ್​ ಸಿಂಗ್ ಅವರ ಸ್ವಹಿತಾಸಕ್ತಿಗಾಗಿ. ಇಷ್ಟೊಂದು ತರಾತುರಿಯಲ್ಲಿ ಈ ಜಿಲ್ಲೆಯನ್ನು ವಿಭಜನೆ ಮಾಡಬಾರದಿತ್ತು ಎಂದು ರವಿಕೃಷ್ಣಾ ರೆಡ್ಡಿ ಅಭಿಪ್ರಾಯಪಟ್ಟಿದ್ದಾರೆ.

ಮೊದಲಿಂದಲೂ ಕೂಡ ಆಡಳಿತಾತ್ಮಕ ದೃಷ್ಠಿಕೋನದಲ್ಲಿ ತುಮಕೂರು, ಬಳ್ಳಾರಿ ಹಾಗೂ ಬೆಳಗಾವಿ ಜಿಲ್ಲೆಗಳನ್ನು ವಿಭಜನೆ ಮಾಡಬೇಕೆಂಬುದು ರಾಜ್ಯ ಸರ್ಕಾರದ ಮುಂದೆ ಪ್ರಸ್ತಾವನೆ ಇತ್ತಾದರೂ ಕೂಡ ಅವರೆಡೂ ಜಿಲ್ಲೆಗಳನ್ನು ವಿಭಜನೆ ಮಾಡದೇ ಕೇವಲ ಬಳ್ಳಾರಿ ಜಿಲ್ಲೆಯನ್ನೇ ಗುರಿಯಾಗಿಸಿಕೊಂಡು ವಿಭಜಿಸಿರೋದು ಸೂಕ್ತವಲ್ಲ ಎಂದರು.

ಏಷ್ಯನ್‌ ಪೇಂಟ್ಸ್‌ ಕಾರ್ಖಾನೆ ವಿರುದ್ಧದ ರೈತರ ಪ್ರತಿಭಟನೆ 14ನೇ ದಿನಕ್ಕೆ

ನಾನೂ ಕೂಡ ಬೆಂಗಳೂರು ಜಿಲ್ಲೆಯಲ್ಲಿ ಹುಟ್ಟಿ ಬೆಳೆದಿರುವೆ.‌ ಆದರೆ ಆಡಳಿತಾತ್ಮಕ ದೃಷ್ಠಿಕೋನ ಇಟ್ಟುಕೊಂಡು ಕಾಲ ಕ್ರಮೇಣ ಈ ಸರ್ಕಾರಗಳು ಈ ಬೆಂಗಳೂರನ್ನು ಎರಡು ಭಾಗವನ್ನಾಗಿ ಮಾಡಿವೆ. ಬೆಂಗಳೂರು ನಗರ ಹಾಗೂ ಬೆಂಗಳೂರು ಗ್ರಾಮಾಂತರ ಎಂದು ವಿಭಜನೆ ಮಾಡಲಾಯಿತು. ಅದೇ ರೀತಿಯಾಗಿ ಈ ಬೆಳಗಾವಿ ಜಿಲ್ಲೆ ಹಾಗೂ ತುಮಕೂರು ಜಿಲ್ಲೆಯನ್ನಾಗಿ ವಿಭಜನೆ ಮಾಡದೇ ಏಕಾಏಕಿ ಬಳ್ಳಾರಿ ಜಿಲ್ಲೆಯನ್ನು ವಿಭಜನೆ ಮಾಡಿರೋದು ಸರಿಯಾದ ಕ್ರಮವಲ್ಲ ಎಂದು ರವಿಕೃಷ್ಣಾ ರೆಡ್ಡಿ ಹೇಳಿದರು.

Last Updated : Dec 7, 2020, 3:26 PM IST

ABOUT THE AUTHOR

...view details