ಬಳ್ಳಾರಿ:ಪತ್ರಕರ್ತರು ವೈದ್ಯರಿದ್ದಂತೆ, ಸಮಾಜಕ್ಕೆ ಚಿಕಿತ್ಸೆ ನೀಡುವುದೇ ಅವರು, ಅದನ್ನು ಬಳಸಿಕೊಳ್ಳಬೇಕು, ಗೌರವಿಸಬೇಕು ಎಂದು ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಹೇಳಿದರು.
ಪತ್ರಕರ್ತರು ಸಮಾಜಕ್ಕೆ ಚಿಕಿತ್ಸೆ ನೀಡುವ ವೈದ್ಯರಂತೆ: ಶಿವಾನಂದ ತಗಡೂರು - ಪತ್ರಕರ್ತರ ಸಮಸ್ಯೆಗಳ ಬಗ್ಗೆ ಸಾಮಾನ್ಯ ಸಭೆ
ಬಳ್ಳಾರಿ ಜಿಲ್ಲಾಧಿಕಾರಿ ಕಚೇರಿ ಆವರಣದ ಪತ್ರಿಕಾ ಭವನದಲ್ಲಿ, ಪತ್ರಕರ್ತರ ಸಂಘದಿಂದ ಜಿಲ್ಲಾ ಮಟ್ಟದ ಕಾರ್ಯನಿರತ ಪತ್ರಕರ್ತರ ಸಮಸ್ಯೆಗಳ ಕುರಿತು ಸಾಮಾನ್ಯ ಸಭೆ ನಡೆಯಿತು.

ಶಿವಾನಂದ ತಗಡೂರು
ಸಭೆಯಲ್ಲಿ ಮಾತನಾಡಿದ ಅವರು, ಯಾರೇ ಆಗಲಿ ತಪ್ಪುದಾರಿಯಲ್ಲಿ ಹೋದರೇ ಅದನ್ನು ತಿದ್ದುವಂತಹ ಶಕ್ತಿ ಮಾಧ್ಯಮಕ್ಕಿದೆ. ಮಾಧ್ಯಮ ಸಮಾಜದಲ್ಲಿ ಒಂದು ಉನ್ನತ ಮಟ್ಟವನ್ನು ಅಲಂಕರಿಸಿದೆ. ಸುಪ್ರೀಂ ಕೋರ್ಟ್ನ ನ್ಯಾಯಾಧೀಶರು ಕೂಡ ನಮಗೆ ಅನ್ಯಾಯವಾಗುತ್ತಿದೆ ಎಂದು ಮಾಧ್ಯಮದ ಮುಂದೆ ಬಂದಿದ್ದರು ಎಂದರು.
ಜಿಲ್ಲಾ ಮಟ್ಟದ ಕಾರ್ಯನಿರತ ಪತ್ರಕರ್ತರ ಸಮಸ್ಯೆಗಳ ಕುರಿತು ಸಾಮಾನ್ಯ ಸಭೆ
ಇನ್ನು ಪತ್ರಕರ್ತರ ಸವಲತ್ತುಗಳ ಕುರಿತು ಮಾತನಾಡಿ, ಮುಂದಿನ ವರ್ಷದಿಂದ ಕಾರ್ಯನಿರತ ವರದಿಗಾರರು, ಬಿಡಿ ಸುದ್ದಿ ಸಂಗ್ರಹಕರು, ಕ್ಯಾಮೆರಾಮೆನ್ಗಳಿಗೆ ಕಡ್ಡಾಯವಾಗಿ ಬಾರ್ ಕೋಡ್ ಹಾಕಿಸಿ ಐಡಿಗಳನ್ನು ನೀಡಲಾಗುತ್ತದೆ ಎಂದು ತಿಳಿಸಿದರು.