ಕರ್ನಾಟಕ

karnataka

ETV Bharat / state

ಮೈಲಾರ ಜಾತ್ರೆಗೆ ಜಿಲ್ಲಾಡಳಿತ ಅನುಮತಿ ನೀಡಬೇಕು: ವೆಂಕಪ್ಪಯ್ಯ ಒಡೆಯರ್ - Mylaralingheshwara Temple

ಪ್ರಸಿದ್ಧ ಮೈಲಾರ ಜಾತ್ರೆಗೆ ಜಿಲ್ಲಾಧಿಕಾರಿ ಅವಕಾಶ ಮಾಡಿಕೊಡಬೇಕು ಎಂದು ಮೈಲಾರಲಿಂಗೇಶ್ವರ ದೇವಸ್ಥಾನದ ಧರ್ಮಕರ್ತ ವೆಂಕಪ್ಪಯ್ಯ ಒಡೆಯರ್ ಒತ್ತಾಯಿಸಿದ್ದಾರೆ.

Venkappayya Wodeyar
ವೆಂಕಪ್ಪಯ್ಯ ಒಡೆಯರ್

By

Published : Feb 8, 2021, 5:33 PM IST

ಹೊಸಪೇಟೆ:ಜಿಲ್ಲಾಧಿಕಾರಿಗಳು ತಮ್ಮ ಆದೇಶವನ್ನು ಪುನರ್ ಪರಿಶೀಲಿಸಿ ಮೈಲಾರ ಜಾತ್ರೆಗೆ ಅನುಮತಿ ನೀಡಬೇಕು ಎಂದು ಮೈಲಾರಲಿಂಗೇಶ್ವರ ದೇವಸ್ಥಾನದ ಧರ್ಮಕರ್ತ ವೆಂಕಪ್ಪಯ್ಯ ಒಡೆಯರ್ ಆಗ್ರಹಿಸಿದ್ದಾರೆ.

ವೆಂಕಪ್ಪಯ್ಯ ಒಡೆಯರ್

ಜಿಲ್ಲೆಯ ಹೂವಿನಹಡಗಲಿಯಲ್ಲಿ ಮಾತನಾಡಿದ ಅವರು, ಮೈಲಾರಲಿಂಗನ ಕಾರ್ಣಿಕ ಕೇಳಲು ಸದ್ಭಕ್ತರು ಬರುತ್ತಾರೆ.‌ ಈಗಾಗಲೇ ಭಕ್ತರಿಂದ ಸಾವಿರಾರು ಕರೆ ಬರುತ್ತಿವೆ. ಧಾರ್ಮಿಕ ಕಾರ್ಯಕ್ರಮಗಳನ್ನು ನಿಲ್ಲಿಸುವುದಕ್ಕೆ ಬರುವುದಿಲ್ಲ. ಸಾಮಾಜಿಕ ಅಂತರ ಹಾಗೂ ಮಾಸ್ಕ್ ಧರಿಸುವ ಮೂಲಕ ಕಾರ್ಯಕ್ರಮಗಳನ್ನು‌ ನಡೆಸಲಾಗುವುದು ಎಂದರು.

ಶಾಸಕ‌ ಪಿ.ಟಿ. ಪರಮೇಶ್ವರ ನಾಯ್ಕ ಮಾತನಾಡಿ, ಈಗ ಎಲ್ಲಾ ಜಾತ್ರೆಗಳು ನಡೆಯುತ್ತಿವೆ. ಕೊಪ್ಪಳದ ಗವಿಸಿದ್ದೇಶ್ವರ ಜಾತ್ರೆ ಸರಳವಾಗಿ ನಡೆದಿದೆ. ಅದೇ ರೀತಿ ಮೈಲಾರ ಜಾತ್ರೆಯನ್ನು ನಡೆಸಬೇಕು. ಜಾತ್ರೆಯನ್ನು ಅದ್ಧೂರಿಯಾಗಿ ಮಾಡುವ ಉದ್ದೇಶ ನಮ್ಮದಲ್ಲ. ಮೈಲಾರ ಜಾತ್ರೆಗೆ ಸಾವಿರಾರು ವರ್ಷದ ಇತಿಹಾಸವಿದೆ. ಜಿಲ್ಲಾಧಿಕಾರಿ ಏಕಪಕ್ಷೀಯ ನಿರ್ಣಯ ತಗೆದುಕೊಳ್ಳದೆ ಶಾಸಕರು, ಭಕ್ತರು, ಸ್ಥಳೀಯರ ಸಮ್ಮುಖದಲ್ಲಿ ಜಾತ್ರೆಯ ಕುರಿತು ನಿರ್ಣಯ ತಗೆದುಕೊಳ್ಳಬೇಕು ಎಂದರು.

ABOUT THE AUTHOR

...view details