ಕರ್ನಾಟಕ

karnataka

ETV Bharat / state

ಸಾವಿನ ಪ್ರಮಾಣ ಕಡಿಮೆ ಮಾಡುವ ದೃಷ್ಟಿಯಿಂದ ಮನೆ ಮನೆ ಸಮೀಕ್ಷೆ: ಜಿಲ್ಲಾಧಿಕಾರಿ ನಕುಲ್

60 ವರ್ಷದ ಮೇಲ್ಪಟ್ಟ ವಯೋವೃದ್ಧರು ಕೊನೆ ಗಳಿಗೆಯಲ್ಲಿ ಕೋವಿಡ್ ಆಸ್ಪತ್ರೆಗೆ ಬರೋದರಿಂದ ಚಿಕಿತ್ಸೆ ಫಲಕಾರಿಯಾಗದೇ ಮೃತಪಡುತ್ತಿದ್ದಾರೆ. ಇವರಿಗೆ ಕೊರೊನಾ ಇರುವುದು ಕೊನೆಯ ಹಂತದಲ್ಲಿ ತಿಳಿಯುತ್ತದೆ. ಈ ನಿಟ್ಟಿನಲ್ಲಿ ಮನೆ ಮನೆ ಸಮೀಕ್ಷೆ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಎಸ್​ ಎಸ್​ ನಕುಲ್​ ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ಎಸ್.ಎಸ್.ನಕುಲ್
ಜಿಲ್ಲಾಧಿಕಾರಿ ಎಸ್.ಎಸ್.ನಕುಲ್

By

Published : Aug 5, 2020, 10:27 AM IST

ಬಳ್ಳಾರಿ: ಸಾವಿನ ಪ್ರಮಾಣ ಕಡಿಮೆ ಮಾಡುವ ದೃಷ್ಟಿಯಿಂದ ಮನೆ ಮನೆ ಸಮೀಕ್ಷೆ ಕಾರ್ಯ ಕೈಗೊಳ್ಳಲಾಗಿದೆ. ಹೀಗಾಗಿ ಕೊರೊನಾ ಕೇಸ್‌ಗಳು ಹೆಚ್ಚಳವಾಗಿದ್ದು, ಯಾರು ಭಯಪಡಬೇಡಿ ಎಂದು ಜಿಲ್ಲಾಧಿಕಾರಿ ಎಸ್.ಎಸ್. ನಕುಲ್ ಹೇಳಿದ್ದಾರೆ.

60 ವರ್ಷದ ಮೇಲ್ಪಟ್ಟ ವಯೋವೃದ್ಧರು ಕೊನೆಗಳಿಗೆಯಲ್ಲಿ ಕೋವಿಡ್ ಆಸ್ಪತ್ರೆಗೆ ಬರೋದರಿಂದ ಚಿಕಿತ್ಸೆ ಫಲಕಾರಿಯಾಗದೇ ಮೃತಪಡುತ್ತಿದ್ದಾರೆ. ಇವರಿಗೆ ಕೊರೊನಾ ಇರುವುದು ಕೊನೆಯ ಹಂತದಲ್ಲಿ ತಿಳಿಯುತ್ತದೆ. ಹೀಗಾಗಿ, ಸಾವಿನ ಪ್ರಮಾಣ ಹೆಚ್ಚಳವಾಗುತ್ತಿತ್ತು. ಇದನ್ನ ತಡೆಗಟ್ಟುವುದಕ್ಕಾಗಿ ಬಳ್ಳಾರಿ, ಸಂಡೂರು, ಹೊಸಪೇಟೆ ಸೇರಿ ನಾನಾ ಕಡೆ ಮನೆ-ಮನೆ ಸಮೀಕ್ಷೆ ಕಾರ್ಯ ಕೈಗೊಳ್ಳಲಾಗುತ್ತಿದೆ.

ಜಿಲ್ಲಾಧಿಕಾರಿ ಎಸ್.ಎಸ್.ನಕುಲ್

ಇದರಿಂದ ಮುಂಚಿತವಾಗಿ ಕೊರೊನಾ ರೋಗಿಗಳನ್ನು ಗುರುತಿಸಿ, ಚಿಕಿತ್ಸೆ ನೀಡಲಾಗುತ್ತಿದೆ. ಗುಣಮುಖರಾಗುವ ಸಂಖ್ಯೆ ಹೆಚ್ಚಳವಾಗಿದೆ. ಪ್ರಾರಂಭದಲ್ಲಿ ಸಮೀಕ್ಷೆ ವೇಳೆ ಕೊರೊನಾ ಸಂಖ್ಯೆ ಹೆಚ್ಚಳವಾಗುತ್ತಿದೆ. ಹಂತ-ಹಂತವಾಗಿ ಎಲ್ಲರ ತಪಾಸಣೆ ನಡೆಸಿ ಚಿಕಿತ್ಸೆ ನೀಡುವುದರಿಂದ ಕೇಸ್‌ಗಳು ಕಡಿಮೆಯಾಗಲಿವೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಇದುವರೆಗೂ ಬಳ್ಳಾರಿಯಲ್ಲಿ 14,688 ಜನರ ಪೈಕಿ 2,933, ಸಂಡೂರು -14,031 ಜನರ ಪೈಕಿ 1,163, ಸಿರುಗುಪ್ಪದಲ್ಲಿ 7,256 ಜನರ ಪೈಕಿ 319, ಕೂಡ್ಲಿಗಿಯಲ್ಲಿ 2407 ಜನರ ಪೈಕಿ 211, ಹಡಗಲಿ 2,608 ಜನರ ಪೈಕಿ 267, ಹೊಸಪೇಟೆ 10,234 ಜನರ ಪೈಕಿ 2,046, ಹೆಚ್.ಬಿ. ಹಳ್ಳಿ 3055 ಜನರ ಪೈಕಿ 168, ಹರಪನಹಳ್ಳಿ 2,562 ಜನರ ಪೈಕಿ 103 ಮತ್ತು ಹೊರ ಜಿಲ್ಲೆಯಿಂದ 104 ಜನರ ಪೈಕಿ 26, ಹೊರ ರಾಜ್ಯದಿಂದ ಬಂದ 36 ಜನರ ಪೈಕಿ 26 ಜನರಲ್ಲಿ ಕೊರೊನಾ ದೃಢಪಟ್ಟಿರೋದು ಸಮೀಕ್ಷೆ ಮೂಲಕ ಗೊತ್ತಾಗಿದೆ.

ಒಟ್ಟು 56,945 ಜನರ ಪೈಕಿ 39,406 ಜನರನ್ನ ಪ್ರಯೋಗಾಲಯದ ಮೂಲಕ ಹಾಗೂ 17,575 ತಪಾಸಣೆ ಮಾಡಲಾಗಿದ್ದು, ಇದರಲ್ಲಿ 7262 ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ನಕುಲ್ ತಿಳಿಸಿದ್ದಾರೆ.

ABOUT THE AUTHOR

...view details