ಕರ್ನಾಟಕ

karnataka

ETV Bharat / state

ಅಗತ್ಯ ವಸ್ತು ಖರೀದಿಗೆ ಜಿಲ್ಲಾಡಳಿತ ಅವಕಾಶ: ಬಳ್ಳಾರಿ, ಹೊಸಪೇಟೆ ಮಾರ್ಕೆಟ್​ನಲ್ಲಿ ಜನಜಂಗುಳಿ - ಅಗತ್ಯ ವಸ್ತುಗಳ ಖರೀದಿಗೆ ಬಳ್ಳಾರಿ ಜಿಲ್ಲಾಡಳಿತ ಅವಕಾಶ

ಇಂದು ಬೆಳಗ್ಗೆ 6 ರಿಂದ ಮಧ್ಯಾಹ್ನ 12 ಗಂಟೆಯವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಕಲ್ಪಿಸಿದ್ದು, ನಗರದ ಮುನ್ಸಿಪಲ್ ಮೈದಾನ ಹಾಗೂ ಬೆಂಗಳೂರು ರಸ್ತೆ ಜನ ಜಂಗುಳಿಯಿಂದ ಕೂಡಿತ್ತು.

ತರಕಾರಿ ಮಾರ್ಕೆಟ್​ನಲ್ಲಿ ಜನ ಜಂಗುಳಿ
ತರಕಾರಿ ಮಾರ್ಕೆಟ್​ನಲ್ಲಿ ಜನ ಜಂಗುಳಿ

By

Published : May 24, 2021, 9:17 AM IST

Updated : May 24, 2021, 10:45 AM IST

ಬಳ್ಳಾರಿ: ಜಿಲ್ಲಾಡಳಿತವು ಇಂದಿನಿಂದ ಎರಡು ದಿನದವರೆಗೆ ಲಾಕ್‌ಡೌನ್ ಸಡಿಲಿಕೆ ಮಾಡಿರೋದರಿಂದ ಬೆಳಗ್ಗೆ ನಗರದ ತರಕಾರಿ ಮಾರುಕಟ್ಟೆಯಲ್ಲಿ ಜನ ಜಾತ್ರೆಯೇ ನೆರೆದಿತ್ತು.

ಮುನ್ಸಿಪಲ್ ಮೈದಾನದಲ್ಲಿ ತಾತ್ಕಾಲಿಕವಾಗಿ ತರಕಾರಿ ಮಾರುಕಟ್ಟೆ ನಿರ್ಮಿಸಲಾಗಿದೆ. ನಾಳೆಯೂ ಬೆಳಿಗ್ಗೆ 6 ರಿಂದ 12 ಗಂಟೆಯವರೆಗೆ ಅಗತ್ಯವಸ್ತುಗಳ ಖರೀದಿಗೆ ಅವಕಾಶ ಕಲ್ಪಿಸಲಾಗಿದೆ. ತಡರಾತ್ರಿ 12 ರಿಂದ 3 ಗಂಟೆಯವರೆಗೆ ಸಗಟು ವ್ಯಾಪಾರ ವಹಿವಾಟು ನಡೆಯಿತು.

ಹೊಸಪೇಟೆಯಲ್ಲೂ ಅಗತ್ಯ ವಸ್ತುಗಳ ಖರೀದಿ ಜೋರು:

ನಗರದ ರಾಮಾ ಟಾಕೀಸ್ ಬಳಿ ಅಗತ್ಯ ವಸ್ತುಗಳ ಖರೀದಿಗೆ ಜನರು ಹೆಚ್ಚಿನ ಸಂಖ್ಯೆಯಲ್ಲಿ‌ ಸೇರಿದ್ದರು. ಕಿರಾಣಿ, ದಿನಸಿ, ಹಣ್ಣು ಖರೀದಿಗೆ ಬಂದ ಜನರು ಸಾಮಾಜಿಕ ಅಂತರ ಪಾಲಿಸಲಿಲ್ಲ. ಸ್ಥಳಕ್ಕೆ ಬಂದ ಪೊಲೀಸರು ಜನರಿಗೆ ಸಾಮಾಜಿಕ‌ ಅಂತರ ಕಾಯ್ದುಕೊಳ್ಳುವಂತೆ ಸೂಚಿಸಿದರು. ತರಕಾರಿ ಮಾರುಕಟ್ಟೆಯಲ್ಲಿನ ಜನಜಂಗುಳಿ ತಪ್ಪಿಸಲು ನಗರದ ಆರು ಕಡೆ ಮಾರುಕಟ್ಟೆ ತೆರೆಯಲಾಗಿದೆ. ಮುನ್ಸಿಪಲ್ ಮೈದಾನ, ದೀಪಾಯನ ಶಾಲೆಯ ಮೈದಾನ, ಟಿ.ಬಿ.ಡ್ಯಾಂ ಮೈದಾ‌ನ,‌ ಬಾಲಾ ಟಾಕೀಸ್ ಹತ್ತಿರದ ಮೈದಾನ, ಪಟೇಲ್ ನಗರದ ಹೈಸ್ಕೂಲ್ ಮೈದಾನ ಹಾಗೂ ಎಂ.ಜೆ.ನಗರ ಪಾನಿಪುರಿ ಮೈದಾನದಲ್ಲಿ ಮಾರುಕಟ್ಟೆಗಳನ್ನು ತೆರೆಯಲಾಗಿದೆ.

ಬಳ್ಳಾರಿ, ಹೊಸಪೇಟೆ ಮಾರ್ಕೆಟ್​ನಲ್ಲಿ ಜನಜಂಗುಳಿ
Last Updated : May 24, 2021, 10:45 AM IST

For All Latest Updates

TAGGED:

ABOUT THE AUTHOR

...view details