ಬಳ್ಳಾರಿ:ಲಾಕ್‌ಡೌನ್‌ನಿಂದಾಗಿ ನೆರೆಹೊರೆಯ ರಾಜ್ಯಗಳಿಂದ ಬಂದು ಗಣಿನಗರಿಯ ಹೊರವಲಯದ ಹಲಕುಂದಿಯ ನಿರ್ಜನ ಪ್ರದೇಶವೊಂದರಲ್ಲಿ ಲಾರಿಯಲ್ಲೇ ದಿನ ದೂಡುತ್ತಿರುವ ಹೊರ ರಾಜ್ಯಗಳ ಕಾರ್ಮಿಕರಿಗೆ ಸಮಾಜ ಕಲ್ಯಾಣ ಇಲಾಖೆ ನೆರವಿಗೆ ಬಂದಿದೆ. ಲಾರಿ ಚಾಲಕರು ಮತ್ತು ಕ್ಲೀನರುಗಳ ಸಂಕಷ್ಟದ ಬಗ್ಗೆ 'ಲಾಕ್‌ಡೌನ್ ಎಫೆಕ್ಟ್, ಬಳ್ಳಾರಿಯಲ್ಲಿ ಲಾರಿಯಲ್ಲೇ ದಿನ ದೂಡುತ್ತಿರುವ ಬೇರೆ ರಾಜ್ಯಗಳ ಕಾರ್ಮಿಕರು!' ಎಂಬ ಶೀರ್ಷಿಕೆಯಡಿ ಈಟಿವಿ ಭಾರತ ವರದಿ ಪ್ರಕಟಿಸಿತ್ತು.
ಸಮಾಜ ಕಲ್ಯಾಣ ಇಲಾಖೆಯಿಂದ ಹೊರ ರಾಜ್ಯಗಳ ಕಾರ್ಮಿಕರಿಗೆ ರೇಷನ್ ಕಿಟ್ ವಿತರಣೆ - ಕಾರ್ಮಿಕರಿಗೆ ರೇಷನ್ ಕಿಟ್ ವಿತರಣೆ
ಈಟಿವಿ ಭಾರತ ವರದಿಯಿಂದ ಎಚ್ಚೆತ್ತುಕೊಂಡ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಎನ್.ರಾಜಪ್ಪ, ಲಾರಿ ಟ್ರಾನ್ಸ್ ಪೋರ್ಟ್ವೊಂದರಲ್ಲಿದ್ದ ಲಾರಿ ಚಾಲಕರು ಹಾಗೂ ಕ್ಲೀನರ್ಗಳನ್ನು ಭೇಟಿಯಾಗಿ ರೇಷನ್ ಕಿಟ್ ವಿತರಿಸಿದರು.
![ಸಮಾಜ ಕಲ್ಯಾಣ ಇಲಾಖೆಯಿಂದ ಹೊರ ರಾಜ್ಯಗಳ ಕಾರ್ಮಿಕರಿಗೆ ರೇಷನ್ ಕಿಟ್ ವಿತರಣೆ Distribution of ration kit](https://etvbharatimages.akamaized.net/etvbharat/prod-images/768-512-6745564-725-6745564-1586573943105.jpg)
ರೇಷನ್ ಕಿಟ್ ವಿತರಣೆ
ಈ ವರದಿಗೆ ಸ್ಪಂದಿಸಿದ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಎನ್.ರಾಜಪ್ಪನವರು ತಮ್ಮ ಸಿಬ್ಬಂದಿಗೆ ರೇಷನ್ ಕಿಟ್ ವಿತರಿಸುವಂತೆ ಸೂಚನೆ ನೀಡಿದ್ದರು.
ಮಹಾರಾಷ್ಟ್ರ ಮೂಲದ ಈ ಸಾಯಿ ಟ್ರಾನ್ಸ್‌ಪೋರ್ಟ್ ಮಾಲೀಕರು ಲಾಕ್‌ಡೌನ್ ಆದಾಗ ಕೇವಲ ಸ್ವಲ್ಪ ಹಣವನ್ನು ಮಾತ್ರ ಖರ್ಚಿಗೆಂದು ನೀಡಿದ್ದರು. ಆ ಹಣ ಖರ್ಚಾಗಿದ್ದು ನಮ್ಮಲ್ಲಿ ರೇಷನ್ ಖರೀದಿಗೂ ಹಣವಿಲ್ಲ. ನಮಗೆ ಕರ್ನಾಟಕ ಸರ್ಕಾರ ಯಾವುದೇ ನೆರವು ನೀಡಿಲ್ಲ ಎಂಬ ಅಳಲನ್ನು ಈಟಿವಿ ಭಾರತ ಜೊತೆಗೆ ಚಾಲಕ ಭೇದಿ ಪಂಡಿತ್ ತೋಡಿಕೊಂಡಿದ್ದರು.