ಬಳ್ಳಾರಿ:ಮಾಜಿ ಶಾಸಕ ನಾರಾ ಸೂರ್ಯನಾರಾಯಣ ರೆಡ್ಡಿ ಮತ್ತು ನಾರಾ ಭರತ್ ರೆಡ್ಡಿ ಅವರ ನೇತೃತ್ವದಲ್ಲಿ, ಬಡ ಜನರಿಗೆ ಉಚಿತವಾಗಿ ಆಹಾರ ಕಿಟ್ ವಿತರಣೆ ಕಾರ್ಯ ನಡೆಯುತ್ತಿದೆ. ನಗರದ ಹೊರವಲಯದ ಸಿದ್ಧಾರ್ಥ ಕಾಲೋನಿಯ ನಿವಾಸಿಗಳಿಗೆ, ಅವರ ಟಚ್ ಫಾರ್ ಲೈಫ್ ಫೌಂಡೇಷನ್ ವತಿಯಿಂದ, ಇಂದು 300 ಬಡ ಜನರಿಗೆ ಉಚಿತ ರೇಷನ್ ಕಿಟ್ ವಿತರಣೆ ಮಾಡಲಾಯಿತು.
ಬಳ್ಳಾರಿಯಲ್ಲಿ 'ಟಚ್ ಫಾರ್ ಲೈಫ್ ಫೌಂಡೇಷನ್' ವತಿಯಿಂದ ರೇಷನ್ ಕಿಟ್ ವಿತರಣೆ..! - ಮಾಜಿ ಶಾಸಕ ನಾರಾ ಸೂರ್ಯನಾರಾಯಣ ರೆಡ್ಡಿ
ಬಳ್ಳಾರಿಯ ಹೊರವಲಯದ ಸಿದ್ಧಾರ್ಥ ಕಾಲೋನಿಯ ನಿವಾಸಿಗಳಿಗೆ, ಟಚ್ ಫಾರ್ ಲೈಫ್ ಫೌಂಡೇಷನ್ ವತಿಯಿಂದ 300 ಬಡ ಜನರಿಗೆ ಉಚಿತ ರೇಷನ್ ಕಿಟ್ ವಿತರಣೆ ಮಾಡಲಾಯಿತು.
![ಬಳ್ಳಾರಿಯಲ್ಲಿ 'ಟಚ್ ಫಾರ್ ಲೈಫ್ ಫೌಂಡೇಷನ್' ವತಿಯಿಂದ ರೇಷನ್ ಕಿಟ್ ವಿತರಣೆ..! Distribution of ration kit by 'Touch for Life Foundation' in Bellary](https://etvbharatimages.akamaized.net/etvbharat/prod-images/768-512-6956267-thumbnail-3x2-smk.jpg)
ಬಳ್ಳಾರಿಯಲ್ಲಿ 'ಟಚ್ ಫಾರ್ ಲೈಫ್ ಫೌಂಡೇಷನ್' ವತಿಯಿಂದ ರೇಷನ್ ಕಿಟ್ ವಿತರಣೆ..!
ಬಳ್ಳಾರಿಯಲ್ಲಿ 'ಟಚ್ ಫಾರ್ ಲೈಫ್ ಫೌಂಡೇಷನ್' ವತಿಯಿಂದ ರೇಷನ್ ಕಿಟ್ ವಿತರಣೆ..!
ಈ ವೇಳೆ ಮಾತನಾಡಿದ ಚಾನಾಳ್ ಶೇಖರ್ ಎಂಬುವವರು, ಟಚ್ ಫಾರ್ ಲೈಫ್ ಫೌಂಡೇಷನ್ ವತಿಯಿಂದ ನಗರದ ವಿವಿಧ ಪ್ರದೇಶ ಬಡ ಜನರಿಗೆ ಒಟ್ಟು 5 ಸಾವಿರ ಕಿಟ್ ವಿತರಣೆ ಮಾಡುತ್ತಿದ್ದಾರೆ. ಅದರಲ್ಲಿ ಇಂದು 300 ಬಡ ಜನರಿಗೆ ಉಚಿತ ರೇಷನ್ ಕಿಟ್ ವಿತರಣೆ ಮಾಡುತ್ತಿದ್ದೇವೆ ಎಂದು ತಿಳಿಸಿದರು. ಜನರು ಸಹ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ತಿಳಿಸಿದರು.