ಬಳ್ಳಾರಿ: ಜಿಲ್ಲಾ ಆಯುಷ್ ಇಲಾಖೆಯಿಂದ ನಗರದ ಮಿಲ್ಲರ್ ಪೇಟೆಯಲ್ಲಿಂದು ಸಮುದಾಯ ಆರೋಗ್ಯ ಕೇಂದ್ರದ ನೂರಾರು ಮಂದಿಗೆ ಹೋಮಿಯೋಪಥಿ ಮಾತ್ರೆಯನ್ನು ಉಚಿತವಾಗಿ ವಿತರಿಸಲಾಯಿತು.
ಮಿಲ್ಲರ್ ಪೇಟೆಯ ಸಮುದಾಯದ ಆರೋಗ್ಯ ಕೇಂದ್ರದ ಮುಖ್ಯಸ್ಥೆ ಡಾ.ಸೌಜನ್ಯ ಅವರ ನೇತೃತ್ವದಲ್ಲಿ ಹೋಮಿಯೋಪಥಿ ವೈದ್ಯರ ತಂಡವು ಸಾಮಾಜಿಕ ಅಂತರ ಕಾಯ್ದುಕೊಂಡು ಆರ್ಸನಿಕ್ ಅಲ್ಬಾರ್ ಮಾತ್ರೆಗಳನ್ನು ವಿತರಿಸಿತು. ಈ ವೇಳೆ, ಪ್ರತಿಯೊಬ್ಬರೂ ಸಾಲಾಗಿ ಬಂದು ತಮ್ಮ ಮನೆಯ ಸದಸ್ಯರ ಆಧಾರ್ ಕಾರ್ಡ್ ನೋಂದಾಯಿಸಿಕೊಂಡು ಔಷಧ ಸ್ವೀಕರಿಸಿದರು.