ಬಳ್ಳಾರಿ: ಜಿಲ್ಲಾ ಕಾಂಗ್ರೆಸ್ ಪಕ್ಷದ ವತಿಯಿಂದ ನಗರದ ಕುರಿಹಟ್ಟಿ, ಹವಂಬಾವಿ ಇತರೆ ಪ್ರದೇಶದ ಕೂಲಿ ಕಾರ್ಮಿಕರಿಗೆ, ಬಡವರಿಗೆ, ನಿರ್ಗತಿಕರಿಗೆ ಆಹಾರ ಧಾನ್ಯಗಳನ್ನು ಉಚಿತವಾಗಿ ವಿತರಣೆ ಮಾಡಲಾಯಿತು.
ಕಾಂಗ್ರೆಸ್ ಪಕ್ಷದಿಂದ ಬಡ ಜನರಿಗೆ ದಿನಸಿ ಕಿಟ್ ವಿತರಣೆ - Distribution of groceries kit
ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಹನುಮಾ ಕಿಶೋರ್ ಮತ್ತು ಮಹಾನಗರ ಪಾಲಿಕೆ ಮಾಜಿ ಸದಸ್ಯ ರಾಮಾಂಜಿನೇಯುಲು, ಬಳ್ಳಾರಿಯ ಬಡ ಜನರಿಗೆ ದಿನಸಿ ಕಿಟ್ ವಿತರಣೆ ಮಾಡಿದ್ರು.
ಬಡ ಜನರಿಗೆ ದಿನಸಿ ಕಿಟ್ ವಿತರಣೆ
ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಹನುಮಾ ಕಿಶೋರ್ ಮತ್ತು ಮಹಾನಗರ ಪಾಲಿಕೆ ಮಾಜಿ ಸದಸ್ಯ ರಾಮಾಂಜಿನೇಯುಲು ದಿನಸಿ ಕಿಟ್ ವಿತರಣೆಗೆ ಚಾಲನೆ ನೀಡಿದರು.
ಸಾರ್ವಜನಿಕರಿಗೆ ಅಕ್ಕಿ, ಗೋಧಿ ಹಿಟ್ಟು, ಅಡುಗೆ ಎಣ್ಣೆ, ಬೇಳೆ ಸೇರಿದಂತೆ ದಿನಸಿ ಇರುವ ರೇಷನ್ ಕಿಟ್ಅನ್ನು ಸುಮಾರು 200ಕ್ಕೂ ಹೆಚ್ಚು ಕುಟುಂಬದವರಿಗೆ ವಿತರಿಸಲಾಯಿತು. ಈ ಕಾರ್ಯವನ್ನು ಕಳೆದ 15 ದಿನಗಳಿಂದ ಮಾಡಲಾಗುತ್ತಿದ್ದು, ಮುಂದಿನ ದಿನಗಳಲ್ಲಿಯೂ ವಿತರಣೆ ಮಾಡುತ್ತೇವೆ ಎಂದು ಮುಖಂಡ ರಾಮಾಂಜಿನೇಯುಲು ತಿಳಿಸಿದ್ದಾರೆ.