ಬಳ್ಳಾರಿ: ಲಾಕ್ ಡೌನ್ ಎಫೆಕ್ಟ್ ನಿಂದ ಬಳ್ಳಾರಿ ನಗರದ ನಾನಾ ಕಡೆಗಳಲ್ಲಿ ನೆಲೆಸಿರುವ ಬಡ - ಕೂಲಿ ಕಾರ್ಮಿಕ ಕುಟುಂಬಗಳಿಗೆ ನಮ್ಮ ಕರವೇ ಜಿಲ್ಲಾ ಘಟಕದಿಂದ ಆಹಾರ ಸಾಮಗ್ರಿ ಕಿಟ್ ಗಳನ್ನ ವಿತರಿಸಲಾಯಿತು.
ಕೂಲಿ ಕಾರ್ಮಿಕ ಕುಟುಂಬಗಳಿಗೆ ನಮ್ಮ ಕರವೇಯಿಂದ ಆಹಾರ ಕಿಟ್ ವಿತರಣೆ - Wage Labor Families in Bellary
ನಗರದ ಬಂಡಿಮೋಟ್, ಕೌಲ್ ಬಜಾರ್ ನ ಮೊದಲನೇ ಗೇಟ್ ಸೇರಿದಂತೆ ನಾನಾ ಕಡೆಗಳಲ್ಲಿ ತಾತ್ಕಾಲಿಕ ಟೆಂಟ್ ಗಳಲ್ಲಿ ನೆಲೆಸಿರುವ ನೂರಾರು ಕೂಲಿಕಾರ್ಮಿಕರಿಗೆ ದಿನಸಿ ಸಾಮಗ್ರಿ, ತರಕಾರಿಗಳನ್ನು ಕರವೇ ಯುವಸೇನೆಯಿಂದ ವಿತರಿಸಲಾಯಿತು.
![ಕೂಲಿ ಕಾರ್ಮಿಕ ಕುಟುಂಬಗಳಿಗೆ ನಮ್ಮ ಕರವೇಯಿಂದ ಆಹಾರ ಕಿಟ್ ವಿತರಣೆ Distribution of Food Products to Wage Labor Families in Bellary](https://etvbharatimages.akamaized.net/etvbharat/prod-images/768-512-7011620-158-7011620-1588307154212.jpg)
ನಗರದ ಬಂಡಿಮೋಟ್, ಕೌಲ್ ಬಜಾರ್ ನ ಮೊದಲನೇ ಗೇಟ್ ಸೇರಿದಂತೆ ನಾನಾ ಕಡೆಗಳಲ್ಲಿ ತಾತ್ಕಾಲಿಕ ಟೆಂಟ್ ಗಳಲ್ಲಿ ನೆಲೆಸಿರುವ ನೂರಾರು ಕೂಲಿ ಕಾರ್ಮಿಕರಿಗೆ ದಿನಸಿ, ತರಕಾರಿ ಸೇರಿ ಆಹಾರ ಪೊಟ್ಟಣಗಳನ್ನ ಕರವೇ ಯುವ ಸೇನೆ ಜಿಲ್ಲಾ ಘಟಕದ ಮಹಿಳಾ ಅಧ್ಯಕ್ಷೆ ವಿಜಯಲಕ್ಷ್ಮಿ ವಿತರಿಸಿದರು.
ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿಮಾನಿಗಳ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಜಿ.ಕನಕ ಅವರಿಂದಲೂ ಕೂಡ ವಿಜಯಪುರ ಜಿಲ್ಲೆಯಿಂದ ಬಳ್ಳಾರಿ ತಾಲೂಕಿನ ಸಂಗನಕಲ್ಲು ಗ್ರಾಮದ ಎನ್ ಹೆಚ್ ಉಪಕಾಲುವೆ ನಿರ್ಮಾಣ ಕಾಮಗಾರಿ ಕೆಲಸಕ್ಕೆಂದು ಆಗಮಿಸಿದ 30 ಕೂಲಿಕಾರ್ಮಿಕ ಕುಟುಂಬಗಳಿಗೆ ಹಾಗೂ ಬಳ್ಳಾರಿ ನಗರದ ನಾನಾ ಕಡೆಗಳಲ್ಲಿರುವ 50 ಕೂಲಿ ಕಾರ್ಮಿಕ ಕುಟುಂಬ ಸದಸ್ಯರಿಗೆ ಆಹಾರ ಸಾಮಗ್ರಿ ಕಿಟ್ಗಳನ್ನ ವಿತರಿಸಿದರು.