ಕರ್ನಾಟಕ

karnataka

ETV Bharat / state

ಬಳ್ಳಾರಿ: 50 ಬಡ ಕುಟುಂಬಗಳಿಗೆ ಆಹಾರ ಪದಾರ್ಥಗಳ ಕಿಟ್ ವಿತರಣೆ - Bellary food kit distribution news

ಕೋವಿಡ್ ಸೋಂಕು ಹರಡದಂತೆ ಲಾಕ್‌ ಡೌನ್ ವಿಧಿಸಿರುವ ಹಿನ್ನೆಲೆಯಲ್ಲಿ ವರ್ಲ್ಡ್‌ ಮಿಷನ್ ಸಂಸ್ಥೆಯ ಬಳ್ಳಾರಿ ಘಟಕ ವತಿಯಿಂದ ಡಿ.ಸಿ.ನಗರದಲ್ಲಿರುವ 50 ಬಡ ಕುಟುಂಬಗಳಿಗೆ ಆಹಾರ ಪದಾರ್ಥಗಳ ಕಿಟ್ ವಿತರಣೆ ಮಾಡಲಾಯಿತು.

Food kit
Food kit

By

Published : Jun 11, 2020, 11:04 AM IST

ಬಳ್ಳಾರಿ: ಕೋವಿಡ್ ಸೋಂಕು ಹರಡದಂತೆ ಲಾಕ್‌ ಡೌನ್ ವಿಧಿಸಿರುವ ಹಿನ್ನೆಲೆಯಲ್ಲಿ ವರ್ಲ್ಡ್‌ ಮಿಷನ್ ಸಂಸ್ಥೆ ಬಳ್ಳಾರಿ ಘಟಕ ವತಿಯಿಂದ ಡಿ.ಸಿ.ನಗರದಲ್ಲಿರುವ 50 ಬಡ ಕುಟುಂಬಗಳಿಗೆ 6 ಕೆ.ಜಿ ತೊಗರಿ ಬೇಳೆ, 5 ಕೆ.ಜಿ ಗೋಧಿ ಹಿಟ್ಟು, 4 ಕೆ.ಜಿ ಎಣ್ಣೆ ಇರುವ ಆಹಾರ ಪದಾರ್ಥಗಳ ಕಿಟ್‌ಗಳನ್ನು ಮಂಗಳವಾರದಂದು ವಿತರಿಸಲಾಯಿತು ಎಂದು ವರ್ಲ್ಡ್ ಮಿಷನ್ ಮ್ಯಾನೇಜರ್ ಪ್ರೇಮಲತಾ ತಿಳಿಸಿದರು.

ಒಂದು ವಾರದಲ್ಲಿ 15 ಗ್ರಾಮಗಳಲ್ಲಿನ 1,202 ಬಡ ಕುಟುಂಬಗಳಿಗೆ ಆಹಾರ ಪದಾರ್ಥಗಳ ಕಿಟ್‌ಗಳನ್ನು ವಿತರಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ಮಮತಾ, ವರ್ಲ್ಡ್‌ ಮಿಷನ್ ಸಂಸ್ಥೆಯ ಸಿಬ್ಬಂದಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

ABOUT THE AUTHOR

...view details