ಹೊಸಪೇಟೆ: ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆ ರಾಜ್ಯ ಬಜೆಟ್ನಲ್ಲಿ ಅನುದಾನ ಹಂಚಿಕೆಯನ್ನು ಮಾಡಿಲ್ಲ. ಇದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಸಂಘಟನೆಗಳು ಹಾಗೂ ವಿದ್ಯಾರ್ಥಿಗಳು ಹೋರಾಟ ಮಾಡಿದರೂ ಸಹ ಕವಡೆ ಕಾಸಿನ ಕಿಮ್ಮತ್ತು ನೀಡಿಲ್ಲ. ಕನ್ನಡ ವಿಶ್ವವಿದ್ಯಾಲಯದಲ್ಲಿ 1000 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಂಶೋಧನೆಯನ್ನು ಮಾಡುತ್ತಿದ್ದಾರೆ. ಅವರಿಗೆ ಹಲವು ತಿಂಗಳಿಂದ ಸಂಶೋಧನೆ ನೀಡುವ ಫೆಲೋಶಿಪ್( ಸಹಾಯ ಧನ) ನೀಡಿಲ್ಲ. ಅಲ್ಲದೇ, ಪ್ರಾಧ್ಯಾಪಕರು ಹಾಗೂ ಹೊರಗುತ್ತಿಗೆ ನೌಕರ ಕಾರ್ಯನಿರ್ವಹಿಸುತ್ತಿದ್ದಾರೆ. ಅವರಿಗೆ ವೇತನ ಸಹ ನೀಡಲಾಗುತ್ತಿಲ್ಲ. ಇದರಿಂದ ವಿಶ್ವ ವಿದ್ಯಾಲಯದ ಗುಣಮಟ್ಟತೆಗೆ ಹೊಡೆತ ಬೀಳುತ್ತಿದೆ.
ಹೋರಾಟಗಳಿಗೆ ಸ್ಫಂದಿಸದ ಸರ್ಕಾರ:
ಬಜೆಟ್ನಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆ 100 ಕೋಟಿ ಅನುದಾನ ಬಿಡುಗಡೆ ಮಾಡಬೇಕು ಎಂದು ನೂರಾರು ವಿದ್ಯಾರ್ಥಿಗಳು ಅನಂತಶಯನ ಗುಡಿಯಿಂದ ರೋಟರಿ ವೃತ್ತದ ವರೆಗೆ ಪಾದಯಾತ್ರೆಯನ್ನು ಹಮ್ಮಿಕೊಂಡಿದ್ದರು. ಇದನ್ನು ಮುನ್ನ ಸರ್ಕಾರಕ್ಕೆ ಹಲವು ಬಾರಿ ಮನವಿ ಸಲ್ಲಿಸಲಾಗಿತ್ತು. ಆದರೂ ಸಹ ಹೋರಾಟಕ್ಕೆ ಸ್ಪಂದಿಸದರೇ ಕುರುಡನ ತೋರಿಸುತ್ತಿದೆ.
ಮಾತು ತಪ್ಪಿದ ಸಚಿವ:
ಉಪಮುಖ್ಯಮಂತ್ರಿ ಹಾಗೂ ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ ಅವರು ಈ ಹಿಂದೆ ಘಟಿಕೋತ್ಸವ ಕಾರ್ಯಕ್ರಮಕ್ಕೆ ಭೇಟಿ ನೀಡಿದ್ದರು. ಕನ್ನಡ ವಿಶ್ವವಿದ್ಯಾಲಯಕ್ಕೆ ಅನುದಾನ ನೀಡಲಾಗುವುದು ಎಂದು ಭರವಸೆ ನೀಡಿದ್ದರು. ಆದರೆ, ಇಲ್ಲಿವರೆಗೂ ವಿಶ್ವವಿದ್ಯಾಲಯಕ್ಕೆ ಬಿಡಿಗಾಸು ಲಭ್ಯವಾಗಿಲ್ಲ.