ಬಳ್ಳಾರಿ:ಜಿಲ್ಲೆಯ ರೈಲ್ವೆ ನಿಲ್ದಾಣದಲ್ಲಿ ಲಿಫ್ಟ್ಗಳಿಲ್ಲದೇ ಅಂಗವಿಕಲರು, ಹಿರಿಯ ನಾಗರಿಕರು ಪರದಾಡುವ ಸ್ಥಿತಿ ಬಂದೋದಗಿದೆ. ಒಂದೇ ಫ್ಲೈ ಓವರ್ನಲ್ಲಿ ಎಲ್ಲ ಪ್ರಯಾಣಿಕರು ಸಂಚರಿಸಬೇಕಾಗಿದೆ.
ಗಣಿನಾಡು ಬಳ್ಳಾರಿಯ ರೈಲ್ವೆ ನಿಲ್ದಾಣದಿಂದ ಪ್ರತಿನಿತ್ಯ 7,500 ರಿಂದ 10,000 ಸಾವಿರ ಜನರು ಪ್ರಯಾಣ ಮಾಡುತ್ತಾರೆ. ಆದ್ರೆ ಇಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ ಇದೆ.
ಸ್ವಯಂಚಾಲಿತ ಲಿಫ್ಟ್ಗಳಿಲ್ಲ:
ಈಟಿವಿ ಭಾರತದೊಂದಿಗೆ ಮಾತನಾಡಿದ ಪ್ರಯಾಣಿಕ ಶಶಿಧರ್ ಬಳ್ಳಾರಿ ರೈಲ್ವೆ ನಿಲ್ದಾಣದ ಫ್ಲಾಟ್ ಫಾರಂ 1 ರಿಂದ 2 ಮತ್ತು 3ರ ಪ್ಲಾಟ್ ಫಾರಂ ಹೋಗಲು ಅಂಗವಿಕಲರಿಗೆ, ಹಿರಿಯ ನಾಗರಿಕರಿಗೆ ಸ್ವಯಂಚಾಲಿತ ಲಿಫ್ಟ್ಗಳಿಲ್ಲ. ಇದರಿಂದ ಆ ಜೀವಗಳಿಗೆ ತೊಂದರೆಯಾಗುತ್ತಿದೆ. ಜೊತೆಗೆ ಮೇಲ್ ಸೇತುವೆ ಒಂದೇ ಕಡೆಯಾಗಿರುವುದರಿಂದ ಒಟ್ಟಿಗೆ ಸೇತುವೆ ಮೇಲೆ ಬರುವವರು ಹಾಗೂ ಹೋಗುವ ಪ್ರಯಾಣಿಕರಿಗೆ ಸಮಸ್ಯೆಯಾಗುತ್ತಿದೆ ಎಂದರು.
ಲಿಫ್ಟ್ಗಳಿಲ್ಲದೇ ಅಂಗವಿಕಲರು, ಹಿರಿಯ ನಾಗರಿಕರ ಪರದಾಟ ಬಳ್ಳಾರಿ ರೈಲ್ವೆ ನಿಲ್ದಾಣದಲ್ಲಿ ಕೇಂದ್ರ ಸರ್ಕಾರ ಕಡೆಯಿಂದ ನೇಮಕಾತಿ ಯಾದವರು ಒಟ್ಟು 52 ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಅದು ಸಾಕಾಗುವುದಿಲ್ಲ ಎನ್ನುವ ಮಾಹಿತಿ ಇದೆ. ಕೆಲಸ ಹೆಚ್ಚಾಗಿದೆ ಹಾಗೆ ಮಾಡಿಕೊಂಡು ಹೋಗುತ್ತಿದ್ದೇವೆ ಎನ್ನುವ ಮಾಹಿತಿ ಅಧಿಕಾರಿಗಳಿಂದ ಬಂದಿದೆ.
ನಿಲ್ದಾಣದಲ್ಲಿ ಮೂರು ವೀಲ್ ಚೇರ್ಗಳಿವೆ:
ಅಂಗವಿಕಲರಿಗೆ, ಹಿರಿಯ ನಾಗರಿಕರಿಗೆ ನಡೆಯಲು ಆಗದಿದ್ದರೇ ವೀಲ್ ಚೇರ್ ಬಳಸಬಹುದು. ಬಳ್ಳಾರಿ ರೈಲ್ವೆ ನಿಲ್ದಾಣದಲ್ಲಿ ಮೂರು ವೀಲ್ ಚೇರ್ಗಳಿವೆ ಅದನ್ನು ಟಿಕೆಟ್ ಕಲೆಕ್ಟರ್ ಕೊಠಡಿಯಲ್ಲಿ ಇರುತ್ತದೆ. ಅದನ್ನು ಯಾರ ಬೇಕಾದ್ರೂ ಬಳಸಿಬಹುದು ಎಂದರು.
ಕ್ಯಾಂಟೀನ್ಗಳಿಗೆ ಯಾವುದೇ ನಾಮಫಲಕ ಅಳವಡಿಸಿಲ್ಲ. ಪ್ರಯಾಣಿಕರು ತಿನ್ನುವ ತಿಂಡಿ, ಕಾಫಿ, ಟೀ, ಆಹಾರ ಇನ್ನಿತರ ವಸ್ತುಗಳ ಬೆಲೆಯನ್ನು ಹೆಚ್ಚಿಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ರೈಲ್ವೆ ಇಲಾಖೆಯಿಂದ ಸಿಬ್ಬಂದಿ ನೇಮಿಸಿ ಸಾರ್ವಜನಿಕರಿಗೆ ಉಚಿತ ಶೌಚಾಲಯ ವ್ಯವಸ್ಥೆ ಕಲ್ಪಿಸಿಕೊಡಬೇಕಾಗಿದೆ. ಇನ್ನು ಕಂಟೋನ್ಮೆಂಟ್ ನಿಲ್ದಾಣ ಪುಂಡಯುವಕರ ಓಪನ್ ಬಾರ್ ಅಂಡ್ ರೆಸ್ಟೋರೆಂಟ್ ಆಗಿದೆ.