ಬಳ್ಳಾರಿ: ಪ್ರೀತಿಗೆ ಯಾವುದೇ ಜಾತಿ-ಧರ್ಮ ಹಾಗೂ ಪಂಥದ ಪರಿಧಿಯೇ ಇರುವುದಿಲ್ಲ. ಇದಕ್ಕೆ ಸಾಕ್ಷಿ ಎಂಬಂತೆ ಜಿಲ್ಲೆಯ ಕೊಟ್ಟೂರು ತಾಲೂಕಿನ ಕಾನಮಡುಗ ಗ್ರಾಮದಲ್ಲಿ ಅನ್ಯ ಧರ್ಮೀಯ ಯುವಕ-ಯುವತಿಯನ್ನು ಹೊಸ ಬಾಳಿಗೆ ಕಾಲಿಟ್ಟಿದ್ದಾರೆ.
ದಾಂಪತ್ಯ ಜೀವನಕ್ಕೆ ಕಾಲಿಟ್ಟ ಅನ್ಯ ಧರ್ಮದ ಯುವಕ-ಯುವತಿ - undefined
ಅನ್ಯ ಧರ್ಮದ ಯುವಕ-ಯುವತಿ ಅನೇಕ ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದು, ನಿನ್ನೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
![ದಾಂಪತ್ಯ ಜೀವನಕ್ಕೆ ಕಾಲಿಟ್ಟ ಅನ್ಯ ಧರ್ಮದ ಯುವಕ-ಯುವತಿ](https://etvbharatimages.akamaized.net/etvbharat/images/768-512-2535065-386-9d5821bc-05fb-4b17-89f7-9c234af0a1fb.jpg)
ಬಳ್ಳಾರಿಯಲ್ಲಿ ಹೊಸ ಜೀವನಕ್ಕೆ ಕಾಲಿಟ್ಟ ವಧುವರ
ಹಡಗಲಿ ಪಟ್ಟಣದ ಒಂದೇ ಕಾಲಿನಿಯ ನಿವಾಸಿಗಳಾದ ರವಿಕುಮಾರ ಮತ್ತು ಸಲ್ಮಾ (ಸುಮಾ) ಪ್ರೀತಿಸಿ ವಿವಾಹವಾದ ನವಜೋಡಿಗಳು.
ಖಾಸಗಿ ಕಂಪನಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ರವಿಕುಮಾರ ಎಂ.ಟೆಕ್ ಪದವೀಧರರಾಗಿದ್ದು, ಸಲ್ಮಾ ಎಂ.ಎಸ್ಸಿ ಪದವೀಧರೆಯಾಗಿದ್ದಾಳೆ. ಇವರಿಬ್ಬರು ಅನೇಕ ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಹಿಂದೂ ಧರ್ಮದ ಸಂಪ್ರದಾಯದಂತೆ ದಾಸೋಹ ಮಠದ ಧರ್ಮಾಧಿಕಾರಿ ಐಮುಡಿ ಶರಾಣಾರ್ಯರ ಸಮ್ಮುಖದಲ್ಲೇ ಈ ಜೋಡಿ ಹೊಸ ದಾಂಪತ್ಯಕ್ಕೆ ಕಾಲಿಟ್ಟಿದೆ.