ಬಳ್ಳಾರಿ: ಕೊರೊನಾ ನಿಯಂತ್ರಿಸಲು ಜನರು ಮನೆಯಿಂದ ಹೊರ ಬರುವಾಗ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂದು ಮಹಾನಗರ ಪಾಲಿಕೆಯ ಉಪಮೇಯರ್ ಎಂ.ಗೋವಿಂದರಾಜಲು ತಿಳಿಸಿದರು.
ಸಾರ್ವಜನಿಕರಿಗೆ ಉಚಿತವಾಗಿ ಮಾಸ್ಕ್ ವಿತರಿಸಿದ ಉಪಮೇಯರ್ ಎಂ.ಗೋವಿಂದರಾಜಲು ನಗರದ ಏಳು ಮಕ್ಕಳ ತಾಯಿ ದೇವಸ್ಥಾನದ ಮುಂಭಾಗದಲ್ಲಿ, ರೇಡಿಯೋ ಪಾರ್ಕ್ ನಿವಾಸಿ ಹಾಗೂ ಮಹಾನಗರ ಪಾಲಿಕೆಯ ಉಪಮೇಯರ್ ಎಂ.ಗೋವಿಂದರಾಜಲು 2 ಸಾವಿರ ಮಾಸ್ಕ್ ಗಳನ್ನು ಉಚಿತವಾಗಿ ವಾಹನ ಸವಾರರಿಗೆ, ಸಾರ್ವಜನಿಕರಿಗೆ, ಆಟೋ ಚಾಲಕರಿಗೆ ನೀಡಿದರು.
ಸಾರ್ವಜನಿಕರಿಗೆ ಉಚಿತ ಮಾಸ್ಕ್ ವಿತರಣೆ ಬಳಿಕ ಮಾತನಾಡಿದ ಅವರು, ಗಣಿನಾಡು ಬಳ್ಳಾರಿ ನಗರದಲ್ಲಿ ದಿನೇ ದಿನೇ ಕೊರೊನಾ ಪಾಸಿಟಿವ್ ಪ್ರಕರಣಗಳು ಹೆಚ್ಚಾಗುತ್ತಿವೆ. ಅದಕ್ಕೆ ಸಾರ್ವಜನಿಕ ಮನೆಯಿಂದ ಹೊರಗಡೆ ಬಂದರೆ ಕಡ್ಡಾಯವಾಗಿ ಮಾಸ್ಕ್, ಸ್ಯಾನಿಟೈಸರ್, ಸಾಮಾಜಿಕ ಅಂತರವನ್ನು ಪಾಲಿಕಸಬೇಕೆಂದು ಜಿಲ್ಲಾಡಳಿತ ತಿಳಿಸಿದೆ. ಅದನ್ನು ಸಾರ್ವಜನಿಕರು ಪಾಲಿಸಬೇಕು ಎಂದು ತಿಳಿಸಿದರು.
ಸಾರ್ವಜನಿಕರಿಗೆ ಉಚಿತ ಮಾಸ್ಕ್ ವಿತರಣೆ ಈ ಸಮಯದಲ್ಲಿ ಎಸಿ ರಮೇಶ್ ಕೋನಾರೆಡ್ಡಿ, ಸಮಾಜಕಲ್ಯಾಣ ಅಧಿಕಾರಿ ರಾಜಪ್ಪ ಮತ್ತು ಎಂ.ಜಿ.ಆರ್ ತಂಡದ ಸದಸ್ಯರು ಭಾಗವಹಿಸಿದ್ದರು.