ಬಳ್ಳಾರಿ:ಜಿಲ್ಲಾ ಗೃಹರಕ್ಷ ದಳ ವತಿಯಿಂದ ತೋರಣಗಲ್ಲು ಗ್ರಾಮದಲ್ಲಿರುವ ಎನ್ಸಿಸಿ ಶಿಬಿರಾರ್ಥಿಗಳಿಗೆ ವಿಪತ್ತುಗಳ ಕುರಿತು ಪೂರ್ವಾ ಸಿದ್ಧತಾ ಕಾರ್ಯಗಾರ ನಿಮಿತ್ತ ಅಣುಕು ಪ್ರದರ್ಶನವನ್ನು ನಡೆಸಲಾಯಿತು.
ಬಳ್ಳಾರಿ: ವಿಪತ್ತುಗಳ ಪೂರ್ವಾ ಸಿದ್ಧತಾ ಕಾರ್ಯಗಾರ ನಿಮಿತ್ತ ಅಣುಕು ಪ್ರದರ್ಶನ - ಬಳ್ಳಾರಿ ಗೃಹರಕ್ಷಕದಳ
ಬಳ್ಳಾರಿ ಜಿಲ್ಲಾ ಗೃಹರಕ್ಷಕದಳ ವತಿಯಿಂದ ತೋರಣಗಲ್ಲು ಗ್ರಾಮದಲ್ಲಿರುವ ಎನ್ಸಿಸಿ ತರಬೇತಿಯ ಶಿಬಿರಾರ್ಥಿಗಳಿಗೆ ವಿಪತ್ತುಗಳ ಕುರಿತು ಪೂರ್ವಾ ಸಿದ್ಧತಾ ಕಾರ್ಯಗಾರ ನಿಮಿತ್ತ ಅಣುಕು ಪ್ರದರ್ಶನವನ್ನು ನಡೆಸಲಾಯಿತು.
ಗೃಹರಕ್ಷಕದಳ ಸಿಬ್ಬಂದಿ ಎಂ. ಎ. ಷಕೀಬ್ ಸಮಾದೇಷ್ಟರು, ವಿಪತ್ತುಗಳು ಹೇಗೆ ಸಂಭವಿಸುತ್ತವೆ?. ವಿಪತ್ತುಗಳು ಸಂಭವಿಸಿದಾಗ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಹಾಗೂ ಕಟ್ಟಡ ಕುಸಿತ ಸಂದರ್ಭದಲ್ಲಿ ಅವಶೇಷಗಳ ಅಡಿಯಲ್ಲಿ ಸಿಲುಕಿರುವವರನ್ನು ಹೇಗೆ ರಕ್ಷಣೆ ಮಾಡಬೇಕು ಮತ್ತು ಅವರಿಗೆ ಪ್ರಥಮ ಚಿಕಿತ್ಸೆ ನೀಡುವ ಬಗ್ಗೆ ಅಣುಕು ಪ್ರದರ್ಶನವನ್ನು ಬಳ್ಳಾರಿ ಗೃಹರಕ್ಷಕದಳ ತಂಡದ ವತಿಯಿಂದ ಪ್ರದರ್ಶಿಸಲಾಯಿತು.
ಪ್ಲೇಟೊನ್ ಕಮಾಂಡರ್ ರವರ ಸಂಯೋಜನೆಯಲ್ಲಿ ಗೃಹರಕ್ಷಕರ ರಕ್ಷಣಾ ತಂಡ ಅಣಕು ಪ್ರದರ್ಶನ ನಡೆಸಿತು. ಹರಿಯಾಣ, ಪಂಜಾಬ್, ಚಂಡೀಗಡ ಮತ್ತು ಕರ್ನಾಟಕ ರಾಜ್ಯದ ಸುಮಾರು 600 ಜನ ಎನ್.ಸಿ.ಸಿ, ಶಿಬಿರಾರ್ಥಿಗಳು ಅಣುಕು ಪ್ರದರ್ಶನ ವೀಕ್ಷಿಸಿದರು.