ಕರ್ನಾಟಕ

karnataka

ETV Bharat / state

ಸೂಕ್ಷ್ಮ ನೀರಾವರಿ ಪದ್ಧತಿ ಮಾರ್ಗ ಸೂಚಿಗಳ ಬದಲಾವಣೆ ಬೇಡ: ಅಮೀರ್ - demand for micro irrigation system guideline change

ಸೂಕ್ಷ್ಮ ನೀರಾವರಿ ಪದ್ಧತಿಯ ಮಾರ್ಗ ಸೂಚಿಗಳನ್ನು ಸರ್ಕಾರ ಬದಲಿಸಿದೆ ಎಂದು ಜಿಲ್ಲಾ ಸೂಕ್ಷ್ಮ ನೀರಾವರಿ ಪರಿಕರಗಳ ವಿತರಕರ ಸಂಘದ ಕಾರ್ಯಾಧ್ಯಕ್ಷ ಅಮೀರ್ ಬೇಸರ ವ್ಯಕ್ತಪಡಿಸಿದ್ದಾರೆ.

demand for micro irrigation system guideline change in ballary
ಅಮೀರ್

By

Published : Oct 13, 2020, 9:13 PM IST

ಬಳ್ಳಾರಿ: ಸೂಕ್ಷ್ಮ ನೀರಾವರಿ ಪದ್ಧತಿಯ ಮಾರ್ಗ ಸೂಚಿಗಳನ್ನು ಸರ್ಕಾರ ಬದಲಿಸಿದ್ದು, ಇದನ್ನು ಕೂಡಲೇ ಹಿಂಪಡೆಯಬೇಕೆಂದು ಜಿಲ್ಲಾ ಸೂಕ್ಷ್ಮ ನೀರಾವರಿ ಪರಿಕರಗಳ ವಿತರಕರ ಸಂಘ ಸರ್ಕಾರಕ್ಕೆ ಮನವಿ‌ ಮಾಡಿದೆ.

ಸೂಕ್ಷ್ಮ ನೀರಾವರಿ ಮಾರ್ಗಸೂಚಿ ಬದಲಾವಣೆಗೆ ಅಮೀರ್​ ಆಕ್ಷೇಪ
ನಗರದ ಜಿಲ್ಲಾಧಿಕಾರಿ ಕಚೇರಿಯ ಆವರಣದ ಪತ್ರಿಕಾ ಭವನದಲ್ಲಿ 'ಈಟಿವಿ ಭಾರತ'ದೊಂದಿಗೆ ಜಿಲ್ಲಾ ಸೂಕ್ಷ್ಮ ನೀರಾವರಿ ಪರಿಕರಗಳ ವಿತರಕರ ಸಂಘದ ಕಾರ್ಯಾಧ್ಯಕ್ಷ ಅಮೀರ್ ಮಾತನಾಡಿ, ಸರ್ಕಾರ ನೀಡುತ್ತಿರುವ ಶೇಕಡ 90 ಸಬ್ಸಿಡಿಯಿಂದ ರೈತರಿಗೆ ಪರಿಕರಗಳನ್ನು ವಿತರಿಸುತ್ತಾ ಬಂದಿದ್ದು, ಇದಕ್ಕೆ ನಮ್ಮ ಬಿಲ್ ಗಳನ್ನು ನೀಡಲಾಗುತ್ತಿತ್ತು. ಆಗ ರೈತರ ಖಾತೆಗೆ ಬಂದ ಸಬ್ಸಿಡಿ ಹಣವನ್ನು ನಮಗೆ ನೀಡುತ್ತಿದ್ದರು. ಆದರೆ, ಸರ್ಕಾರ ಕಳೆದ ಸೆ. 29 ರಂದು ಹೊಸ ಮಾರ್ಗಸೂಚಿ ಹೊರಡಿಸಿದೆ. ಅದರ ಪ್ರಕಾರ ಇನ್ನು‌ ಮುಂದೆ ಡೀಲರ್​ಗಳ ಬಿಲ್​ಗಳನ್ನು ಪರಿಗಣಿಸುವುದಿಲ್ಲ ಎಂದರು.

ಅಲ್ಲದೆ ರೈತರು ಆರ್.ಟಿ.ಜಿ.ಎಸ್ ಮೂಲಕ ತಮ್ಮ‌ ಪಾಲಿನ ಹಣ ತುಂಬಬೇಕು ಎಂದಿದೆ. ಇದರಿಂದ ರೈತರಿಗೆ ಯೋಜನೆಯು ಸಮರ್ಪಕವಾಗಿ ತಲುಪುವುದು ಕಷ್ಟವಾಗಲಿದೆ. ಅದಕ್ಕಾಗಿ ಈ ಹಿಂದಿನಂತೆ ವಿತರಕರಿಂದ ಬಿಲ್ ಪಡೆದು ವಂತಿಗೆ ಹಣವನ್ನು ವಿತರಕರಿಗೆ ನೀಡಬೇಕು. ಆರ್ಥಿಕ ವರ್ಷ ಪ್ರಾರಂಭದಲ್ಲೇ ಮಾರ್ಗಸೂಚಿ ಬಿಡುಗಡೆ ಮಾಡಿ ಕಾರ್ಯಾದೇಶ ನೀಡಬೇಕು. ಬೆಲೆ ಏರಿಕೆಗೆ ಬದಲಾಗಿ ದರ ಪಟ್ಟಿ ಬದಲಿಸಬೇಕು ಎಂದು ಅವರು ಒತ್ತಾಯಿಸಿದರು.

ABOUT THE AUTHOR

...view details