ಹೊಸಪೇಟೆ :ಸರ್ಕಾರಿ ಬಸ್‌ಗಳ ಸಂಚಾರವಿಲ್ಲದಿದ್ದರಿಂದ ಖಾಸಗಿ ವಾಹನಗಳಿಗೆ ಫುಲ್ ಡಿಮ್ಯಾಂಡ್ ಬಂದಿದೆ. ಪ್ರಯಾಣಿಕರುಕ್ರೂಸರ್ ಹಾಗೂ ಆಟೋಗಳ ಮೊರೆ ಹೋಗುತ್ತಿದ್ದಾರೆ. ನಗರದ ಬಸ್ ನಿಲ್ದಾಣ ಮುಂಭಾಗ ಖಾಸಗಿ ವಾಹನಗಳು ಸಾಲುಗಟ್ಟಿ ನಿಂತಿವೆ. ಬಸ್‌ಗಳ ಅಲಭ್ಯ ಕಾರಣ ಪ್ರಯಾಣಿಕರು ಖಾಸಗಿ ವಾಹನಗಳನ್ನೇ ಅವಲಂಬಿಸುವ ಪರಿಸ್ಥಿತಿ ಎದುರಾಗಿದೆ.
ಮೂರು ಪಟ್ಟು ಹಣ :ಹೊಸಪೇಟೆಯಿಂದ ಬಳ್ಳಾರಿಗೆ ಬಸ್ ದರ 60 ರೂ. ಇದೆ. ಆದರೆ, ಆಟೋದಲ್ಲಿ ಒಬ್ಬರಿಗೆ 250 ರೂ. ಪಡೆಯಲಾಗುತ್ತಿದೆ. ಅಂದ್ರೆ ಪ್ರಯಾಣಿಕರು ಮೂರು ಪಟ್ಟು ಹೆಚ್ಚು ಹಣವನ್ನು ನೀಡಬೇಕಾಗಿದೆ. ಹೀಗಾಗಿ ಮುಷ್ಕರದಿಂದ ಪ್ರಯಾಣಿಕರ ಜೇಬಿಗೆ ಕತ್ತರಿ ಬಿದ್ದಿದೆ.