ಬಳ್ಳಾರಿ: ಗಣಿನಾಡಿನಲ್ಲಿ ಬೆಳಕಿನ ಹಬ್ಬ ದೀಪಾವಳಿಯ ಸಂಭ್ರಮ ಜೋರಾಗಿತ್ತು. ಉತ್ತರ ಕರ್ನಾಟಕದಲ್ಲಿ ಭೀಕರ ಪ್ರವಾಹದಿಂದ ಸಾಕಷ್ಟು ಬೆಳೆಗಳು ನಾಶವಾಗಿ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಆದರೂ ಹಬ್ಬದ ಖರೀದಿ ಮಾತ್ರ ಕಡಿಮೆಯಾಗಿರಲಿಲ್ಲ.
ಚೆಂಡು ಹೂವು, ಬಾಳೆ ಎಲೆ, ವಿವಿಧ ಆಕಾರದ ಪಣತಿ, ಎಲೆ-ಅಡಿಕೆ, ಮಾವಿನ ಎಲೆ ಸೇರಿದಂತೆ ಇನ್ನಿತರೆ ಅಗತ್ಯ ವಸ್ತುಗಳ ಖರೀದಿಗೆ ಸಾರ್ವಜನಿಕರು ಮುಗಿಬಿದ್ದಿದ್ದರು.
ಗಣಿನಾಡಿನಲ್ಲಿ ದೀಪಾವಳಿ ಸಂಭ್ರಮ ಅತ್ಯಾಕರ್ಷಣೆಯ ಕಳಸದ ಕಾಯಿ :
ನಗರದ ಬೆಂಗಳೂರು ರಸ್ತೆಯಲ್ಲಿ ವಿಶೇಷ ಕಳಸದ ಕಾಯಿಯನ್ನು ಮಾರಾಟ ಮಾಡಲಾಗುತ್ತೆ. ಆ ವಿಶೇಷ ತೆಂಗಿನಕಾಯಿ ಒಂದಕ್ಕೆ 30 ರೂ.
ತೆಂಗಿನಕಾಯಿ ವ್ಯಾಪಾರಿ ಮಧು ಮಾತನಾಡಿ, ದೀಪಾವಳಿ, ದಸರಾ ಹಬ್ಬಗಳಿಗೆ ದೂರದ ಬೆಂಗಳೂರು, ಹುಬ್ಬಳ್ಳಿ ಸೇರಿದಂತೆ ಇನ್ನಿತರೆ ದೊಡ್ಡದೊಡ್ಡ ನಗರಗಳಲ್ಲಿ ನಾವು ತಯಾರಿಸುವ ಈ ತೆಂಗಿನಕಾಯಿಗೆ ಬೇಡಿಕೆ ಇದೆ ಎಂದರು.
ಹೊಸಪೇಟೆಯಲ್ಲಿ ದೀಪಾವಳಿ ಸಂಭ್ರಮ :
ಹೊಸಪೇಟೆ ನಗರದಲ್ಲಿ ಮಾರುಕಟ್ಟೆಗಳು ಮತ್ತು ರಸ್ತೆಗಳು ಜನಜಂಗುಳಿಯಿಂದ ಕೂಡಿದ್ದವು. ಕಬ್ಬು , ಬಾಳೆದಿಂಡು ಹಾಗೂ ಚೆಂಡು ಹೂಗಳು ವ್ಯಾಪಾರ ಜೋರಾಗಿತ್ತು. ನೆರೆಯಿಂದಾಗಿ ಬೆಲೆ ಏರಿಕೆಯಾಗಿದ್ದರೂ ಹಬ್ಬದ ಸಂಭ್ರಮ ಮಾತ್ರ ಜೋರಾಗಿತ್ತು.