ಕರ್ನಾಟಕ

karnataka

ETV Bharat / state

ಗಣಿ ಜಿಲ್ಲೆಯಲ್ಲಿ ತಗ್ಗಿದ ಹೆಚ್​ಐವಿ ಸೋಂಕಿತ ಪ್ರಕರಣಗಳು,ಡಿಎಪಿಸಿಯು ವರದಿ - ಬಳ್ಳಾರಿ ಜಿಲ್ಲೆಯಲ್ಲಿ ಹೆಚ್​ಐವಿ ಸೋಂಕಿತ ಪ್ರಕರಣಗಳು

ಗಣಿನಗರಿ ಬಳ್ಳಾರಿ ಜಿಲ್ಲೆಯಾದ್ಯಂತ ಹೆಚ್​ಐವಿ ಸೋಂಕಿತ ಪ್ರಕರಣಗಳು ವರ್ಷದಿಂದ ವರ್ಷಕ್ಕೆ ಗಣನೀಯವಾಗಿ ತಗ್ಗಿದೆ.

Decreased HIV-infected cases
ಜಿಲ್ಲೆಯಲ್ಲಿ ತಗ್ಗಿತು ಹೆಚ್​ಐವಿ ಪ್ರಕರಣಗಳು

By

Published : Dec 10, 2019, 10:38 PM IST

ಬಳ್ಳಾರಿ:ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲಿ ಹೆಚ್​ಐವಿ ಸೋಂಕಿತ ಪ್ರಕರಣಗಳು ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದ್ದು, ಶೇ 0.25ರಷ್ಟು ಇಳಿಕೆಯಾಗಿದೆ.

ಈ ಹಿಂದಿನ ಅಂಕಿ ಸಂಖ್ಯೆಗೂ ಈಗಿನ ಅಂಕಿ ಸಂಖ್ಯೆಗಳಿಗೆ ಹೋಲಿಕೆ ಮಾಡಿ ನೋಡಿದಾಗ ಈ ಬಾರಿ ಗಣನೀಯ ಪ್ರಮಾಣದಲ್ಲಿ ಹೆಚ್​​ಐವಿ ಸೋಂಕಿತ ಪ್ರಕರಣಗಳು ತಗ್ಗಿದೆ ಎಂಬ ಮಾಹಿತಿಯನ್ನು ಡಿಎಪಿಸಿಯು(ಏಡ್ಸ್​​ ತಡೆ ಮತ್ತು ನಿಯಂತ್ರಣ ಸಂಸ್ಥೆ) ವಿಭಾಗವು ಬಹಿರಂಗಪಡಿಸಿದೆ.

ಜಿಲ್ಲೆಯಲ್ಲಿ ತಗ್ಗಿತು ಹೆಚ್​ಐವಿ ಪ್ರಕರಣಗಳು

2002 ರಿಂದ ಅಕ್ಟೋಬರ್ 2019ರವರೆಗೆ ಅಂದಾಜು 14,59,203 ಮಂದಿಯನ್ನು ಹೆಚ್​ಐವಿ ಪರೀಕ್ಷೆಗೆ ಒಳಪಡಿಸಲಾಗಿದೆ. ಅಂದಾಜು 26,400 ಮಂದಿ ಹೆಚ್​ಐವಿ ಸೋಂಕಿತರೆಂದು ಗುರುತಿಸಲಾಗಿದ್ದು, ಸುಮಾರು 8,288 ಮಂದಿಗೆ ಎಆರ್​ಟಿ ಚಿಕಿತ್ಸೆಯನ್ನು ನೀಡಲಾಗುತ್ತಿದೆ.

ಈವರೆಗೆ 5306 ಮಂದಿ ಹೆಚ್​ಐವಿ ಸೋಂಕಿತ ಕಾಯಿಲೆಯಿಂದ ಜಿಲ್ಲೆಯಲ್ಲಿ ಮರಣ ಹೊಂದಿದ್ದಾರೆ. ಹಾಗು 49 ತೃತೀಯ ಲಿಂಗಿಗಳು ಹಾಗೂ 609 ಮಕ್ಕಳು ಎಆರ್​ಟಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ABOUT THE AUTHOR

...view details