ಬಳ್ಳಾರಿ:ಸಂತ್ರಸ್ತರಿಗೆ ಸಮರೋಪಾದಿಯಲ್ಲಿ ಪರಿಹಾರ ನೀಡುವ ಸಲುವಾಗಿ ರಾಜ್ಯದ ನೆರೆಯನ್ನು ಕೇಂದ್ರ ಸರ್ಕಾರ ರಾಷ್ಟ್ರೀಯ ವಿಪತ್ತು ಎಂದು ಘೋಷಣೆ ಮಾಡಬೇಕೆಂದು ಕರ್ನಾಟಕ ಜನಸೈನ್ಯ ಸಂಘಟನೆ ಆಗ್ರಹಿಸಿದೆ.
ರಾಜ್ಯದ ನೆರೆಯನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಿ: ಜನಸೈನ್ಯ ಸಂಘಟನೆ ಆಗ್ರಹ - central Government
ರಾಜ್ಯದಲ್ಲಿ ಉಂಟಾದ ನೆರೆಯನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಣೆ ಮಾಡಲು ಜನಸೈನ್ಯ ಸಂಘಟನೆ ಆಗ್ರಹಿಸಿದೆ. ರಾಜ್ಯದಲ್ಲಿ ನೆರೆ ಪರಿಹಾರವಾಗಿ ಘೋಷಿಸಿರುವ ಮೊತ್ತ ಯಾವುದಕ್ಕೂ ಸಾಲದು. ಆದ್ದರಿಂದ ರಾಷ್ಟ್ರೀಯ ವಿಪತ್ತಾಗಿ ಘೋಷಿಸಿ ಹೆಚ್ಚಿನ ಪರಿಹಾರಧನವನ್ನು ನೀಡಬೇಕು ಎಂದು ಒತ್ತಾಯಿಸಿದೆ.
ನಗರದ ಡಿಸಿ ಕಚೇರಿ ಆವರಣದಲ್ಲಿ ಜನಸೈನ್ಯ ಸಂಘಟನೆ ರಾಜ್ಯ ಘಟಕದ ಅಧ್ಯಕ್ಷ ಕೆ.ಯರಿಸ್ವಾಮಿ ಮಾತನಾಡಿ, ನೆರೆ ಹಾವಳಿಯಿಂದ ಮುಂಗಾರು ಹಂಗಾಮಿನಲ್ಲಿ ಸರಿಸುಮಾರು 67,000 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಷ್ಟ ಉಂಟಾಗಿದೆ. ಅದಕ್ಕೆ ಸೂಕ್ತ ಪರಿಹಾರ ಒದಗಿಸಲು ಉಭಯ ಸರ್ಕಾರಗಳು ಮುಂದಾಗಬೇಕು. ಅಲ್ಲದೇ, ಉತ್ತರ ಕರ್ನಾಟಕ ಹಾಗೂ ಹೈದರಾಬಾದ್ ಕರ್ನಾಟಕ ಭಾಗದ ಆಯ್ದ ಜಿಲ್ಲೆಗಳಲ್ಲಿ ಸುರಿದ ಮಳೆಯಿಂದ ನೂರಾರು ಮನೆಗಳು ಕುಸಿತ ಕಂಡಿವೆ. ಕೇವಲ 5 ಲಕ್ಷ ರೂ.ಗಳ ಪರಿಹಾರವನ್ನು ಮುಖ್ಯಮಂತ್ರಿ ಘೋಷಣೆ ಮಾಡಿದ್ದಾರೆ. ಆ ಪರಿಹಾರ ಶೆಡ್ ಹಾಕಿಕೊಳ್ಳಲಿಕ್ಕೂ ಸಾಲದು. ಅದನ್ನು 25 ಲಕ್ಷಕ್ಕೆ ಏರಿಕೆ ಮಾಡಬೇಕು ಎಂದು ಒತ್ತಾಯಿಸಿದರು.
ನೆರೆ ಸಂತ್ರಸ್ತರಿಗೆ ಅಗತ್ಯ ವಸ್ತುಗಳ ಖರೀದಿಗೆ ಕೇವಲ 10,000 ರೂ.ಗಳನ್ನು ಮಾತ್ರ ಹೆಚ್ಚಿಸಿದ್ದು, ಅದು ಕೂಡ ಹೆಚ್ಚಿಸಬೇಕು. ಹಾಗೂ ನೆರೆ ಹಾವಳಿಯಲ್ಲಿ ಸಾವನ್ನಪ್ಪಿದ್ದ ಅವಲಂಬಿತ ಕುಟುಂಬ ಸದಸ್ಯರ ಜೀವನೋಪಾಯಕ್ಕಾಗಿ ಕೇವಲ 5 ಲಕ್ಷ ರೂ.ಗಳ ಪರಿಹಾರ ಧನ ಘೋಷಣೆ ಮಾಡಿದ್ದಾರೆ. ಅದನ್ನು 20-25 ಲಕ್ಷದವರೆಗೆ ಹೆಚ್ಚಿಸಬೇಕೆಂದು ಆಗ್ರಹಿಸಿದ್ದಾರೆ.