ಬಳ್ಳಾರಿ: ಹಾವು ಕಚ್ಚಿ ರೈತ ಮಹಿಳೆಯೊಬ್ಬರು ಸಾವನ್ನಪ್ಪಿದ ಘಟನೆ ತಾಲೂಕಿನ ಸಂಜೀವರಾಯನ ಕೋಟೆ ಗ್ರಾಮದಲ್ಲಿ ಭಾನುವಾರ ನಡೆದಿದೆ.
ಬಳ್ಳಾರಿ: ಹಾವು ಕಚ್ಚಿ ರೈತ ಮಹಿಳೆ ಸಾವು - ಸಂಜೀವರಾಯನ ಕೋಟೆ ಗ್ರಾಮದ ಮಹಿಳೆ ಸಾವು
ಹಾವು ಕಚ್ಚಿ ರೈತ ಮಹಿಳೆಯೊಬ್ಬರು ಸಾವನ್ನಪ್ಪಿದ ಘಟನೆ ಬಳ್ಳಾರಿ ತಾಲೂಕಿನ ಸಂಜೀವರಾಯನ ಕೋಟೆ ಗ್ರಾಮದಲ್ಲಿ ನಿನ್ನೆ ನಡೆದಿದೆ.
Died
ಗ್ರಾಮದ ಲಿಂಗರೆಡ್ಡಿ ಎಂಬುವರ ಪತ್ನಿ ತಿಮ್ಮಕ್ಕ (41) ಮೃತಪಟ್ಟವರು. ಮಹಿಳೆ ವಿಶ್ರಾಂತಿ ಪಡೆಯಲು ಮಲಗಿದ್ದ ಸಂದರ್ಭದಲ್ಲಿ ಹಾವು ಕಚ್ಚಿದೆ.
ಮಲಗಿದ ವೇಳೆ ಹಾವು ಕಚ್ಚಿರುವುದರಿಂದ ಗೊತ್ತಾಗಿಲ್ಲ. ಒಂದು ಗಂಟೆ ನಂತರ ತಲೆ ಸುತ್ತು ಬಂದ ಹಿನ್ನೆಲೆ ಎದ್ದು ನೋಡಿದಾಗ ಹಾಸಿಗೆಯಿಂದ ಹಾವು ಹೊರ ಬಂದಿದೆ.
ತಕ್ಷಣ ಮಹಿಳೆಯನ್ನು ನಗರದ ಆಸ್ಪತ್ರೆಗೆ ಕರೆದೊಯ್ಯಲು ಮುಂದಾದಾಗ ಸಂಡೇ ಲಾಕ್ ಡೌನ್ ಗೆ ಹೆದರಿ ವಾಹನ ಚಾಲಕರು ಬಾರದ ಹಿನ್ನೆಲೆ ಊರಿನಲ್ಲಿಯೇ ನಾಟಿ ವೈದ್ಯರಿಂದ ಔಷಧಿ ಕೊಡಿಸಿದ್ದರು. ಅದರೆ ಚಿಕಿತ್ಸೆ ಫಲಕಾರಿಯಾಗದೆ ತಿಮ್ಮಕ್ಕ ಸಾವನ್ನಪ್ಪಿದ್ದಾರೆ.