ಕರ್ನಾಟಕ

karnataka

ETV Bharat / state

ಹಂಪಿಯ ತುಂಗಭದ್ರಾ ನದಿಯಲ್ಲಿ ಮೊಸಳೆಯ ಕಳೇಬರ ಪತ್ತೆ - Dead crocodile found hospet news

ಐತಿಹಾಸಿಕ ಹಂಪಿಯ ತುಂಗಭದ್ರಾ ನದಿಯಲ್ಲಿ ಮೃತ ಮೊಸಳೆಯ ಕಳೇಬರ ಪತ್ತೆಯಾಗಿದೆ.

Tungabhadra River
ಮೃತಪಟ್ಟ ಮೊಸಳೆ

By

Published : Mar 15, 2020, 12:14 PM IST

ಹೊಸಪೇಟೆ: ಹಂಪಿಯ ವಿರೂಪಾಕ್ಷೇಶ್ವರ ದೇವಸ್ಥಾನದ ಎಡ ಭಾಗದಲ್ಲಿರುವ ತುಂಗಭದ್ರಾ ನದಿಯಲ್ಲಿ ಮೊಸಳೆಯ ಕಳೇಬರ ಪತ್ತೆಯಾಗಿದೆ.

ತಾಲೂಕಿನ ಐತಿಹಾಸಿಕ ಹಂಪಿಯ ತುಂಗಭದ್ರಾ ನದಿಯಲ್ಲಿ ಜನರ ಕಣ್ಣಿಗೆ ಮೊಸಳೆ ಕಾಣುತ್ತಿದ್ದಂತೆ ಆತಂಕಕ್ಕೆ ಒಳಗಾಗಿದ್ದಾರೆ. ಎಲ್ಲಾ ಜನರು ಬದುಕಿರುವ ಮೊಸಳೆ ಎಂದು ತಿಳಿದುಕೊಂಡಿದ್ದರು. ಹತ್ತಿರ ಬಂದ ಮೇಲೆ ಮೊಸಳೆ ಮೃತಪಟ್ಟಿರುವುದು ತಿಳಿದಿದೆ. ಸಾರ್ವಜನಿಕರು ಮೊಸಳೆಯ ಫೋಟೋಗಳನ್ನು‌ ಸೆರೆ ಹಿಡಿದಿದ್ದಾರೆ. ನಂತರ ಈ ಕುರಿತು ಮಾಹಿತಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳಿಗೆ ತಿಳಿಸಿದ್ದಾರೆ.

ABOUT THE AUTHOR

...view details