ಬಳ್ಳಾರಿ:ಬಳ್ಳಾರಿಯ ಐತಿಹಾಸಿಕ ಸ್ಥಳಗಳು ಹಾಗೂ ಮನೋರಮಣೀಯ ಬೆಟ್ಟ, ಗುಡ್ಡಗಳ ದೃಶ್ಯಗಳನ್ನು ಆಗಸದಿಂದ ವೀಕ್ಷಿಸಲು ಉತ್ಸವದ ನಿಮಿತ್ತ ಆಯೋಜಿಸಲಾಗಿರುವ ಬಳ್ಳಾರಿ ಬೈಸ್ಕೈನಲ್ಲಿ ಪ್ರತಿಯೊಬ್ಬರೂ ಹಾರಾಟ ಮಾಡಿ ಆನಂದಿಸಿ ಎಂದು ಜಿಲ್ಲಾಧಿಕಾರಿ ಪವನ್‍ಕುಮಾರ್ ಮಾಲಪಾಟಿ ಅವರು ಕರೆ ನೀಡಿದರು.
ಬಳ್ಳಾರಿ ಜಿಲ್ಲಾಡಳಿತದ ವತಿಯಿಂದ ಮೊದಲ ಬಾರಿಗೆ ನಡೆಸಲಾಗುತ್ತಿರುವ ಬಳ್ಳಾರಿ ಉತ್ಸವದ ನಿಮಿತ್ತ ಆಗಸದಿಂದ ಬಳ್ಳಾರಿಯನ್ನು ವೀಕ್ಷಿಸಲು ನಗರದ ಕೊಳಗಲ್ ವಿಮಾನ ನಿಲ್ದಾಣದಿಂದ ಬಳ್ಳಾರಿ ಬೈಸ್ಕೈಗೆ ಹಸಿರು ನಿಶಾನೆ ತೋರಿಸುವುದರ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು. ಬೈಸ್ಕೈನಲ್ಲಿ ಸ್ವತಃ ಜಿಲ್ಲಾಧಿಕಾರಿಗಳೇ ಹೆಲಿಕಾಪ್ಟರ್ನಲ್ಲಿ ಪ್ರಯಾಣಿಸಿ ತಮ್ಮ ಅನುಭವವನ್ನು ಹಂಚಿಕೊಂಡರು.
ಇದನ್ನು ಓದಿ:ಮಧ್ಯಪ್ರದೇಶದ ಬಸ್ ಚಾಲಕನ ಮಗಳಿಗೆ ಇಸ್ರೋದಲ್ಲಿ ಹುದ್ದೆ: ಇದು ಸಾಧಕಿ ಸನಾಳ ಯಶೋಗಾಥೆ!
ಈ ಹಿಂದೆ ಹಂಪಿ ಉತ್ಸವದಲ್ಲಿ ಬೈಸ್ಕೈ ಇರುತ್ತಿತ್ತು. ಈಗ ಮೊದಲ ಬಾರಿಗೆ ಪ್ರವಾಸೋದ್ಯಮ ಇಲಾಖೆ ಮತ್ತು ತುಂಬೆ ಏವಿಯೇಷನ್ ಇವರ ಸಂಯುಕ್ತಾಶ್ರಯದಲ್ಲಿ ಚೊಚ್ಚಲ ಉತ್ಸವದ ಪ್ರಯುಕ್ತ ಬಳ್ಳಾರಿ ನಗರದಲ್ಲಿ ಆಯೋಜಿಸಲಾಗಿದೆ. ಈ ಬೈಸ್ಕೈಯುು ಉತ್ಸವಕ್ಕೆ ನಗರದ ಜನತೆಯ ಉತ್ಸಾಹವನ್ನು ಇನ್ನಷ್ಟು ಹೆಚ್ಚಿಸಲಿದೆ ಎಂದು ಹೇಳಿದರು.
ಮನೋರಮಣಿಯ ದೃಶ್ಯಗಳನ್ನು ನೋಡಿ ಆನಂದಿಸಬಹುದಾಗಿದೆ: ಬೈಸ್ಕೈನಲ್ಲಿ ಹೆಲಿಕಾಪ್ಟರ್ ಮೂಲಕ 15 ನಿಮಿಷಗಳ ಕಾಲ ಆಗಸದಿಂದ ಬಳ್ಳಾರಿಯ ಪ್ರಸಿದ್ಧ ಸ್ಥಳಗಳಾದ ತುಮಟಿಯ ಐತಿಹಾಸಿಕ ಬ್ರಿಟಿಷ್ ಬಂಗಲೆ ಹಾಗೂ ಸಾಲು ಬೆಟ್ಟ, ಬಳ್ಳಾರಿ ಕೋಟೆ, ಸಂಗನಕಲ್ಲು ಗುಡ್ಡ ಸೇರಿದಂತೆ ನಗರವನ್ನು ವೀಕ್ಷಿಸಬಹುದಾಗಿದೆ. ಹೆಲಿಕಾಪ್ಟರ್ನಲ್ಲಿ ಒಂದು ಬಾರಿಗೆ 6 ಪ್ರಯಾಣಿಕರು ಹಾರಾಟ ನಡೆಸುವ ಸಾಮರ್ಥ್ಯವನ್ನು ಹೊಂದಿದ್ದು, ಒಬ್ಬರಿಗೆ 3500 ದರ ನಿಗದಿಪಡಿಸಲಾಗಿದೆ. ಸಾರ್ವಜನಿಕರು ಹೆಲಿಕಾಪ್ಟರ್ನಲ್ಲಿ ಸಂಚರಿಸಿ ನಗರ ಸೇರಿದಂತೆ ಐತಿಹಾಸಿಕ ಮನೋರಮಣಿಯ ದೃಶ್ಯಗಳನ್ನು ನೋಡಿ ಆನಂದಿಸಬಹುದಾಗಿದೆ ಎಂದು ಹೇಳಿದರು.