ಕರ್ನಾಟಕ

karnataka

ETV Bharat / state

ಚುನಾವಣೆ ಪ್ರಕ್ರಿಯೆಗಳ ಜೊತೆಗೆ ಕೋವಿಡ್ ನಿಯಮಗಳಿಗೆ ಒತ್ತು ನೀಡಿ: ಡಿಸಿ ನಕುಲ್

ಚುನಾವಣೆ ಪ್ರಕ್ರಿಯೆಗಳ ಜೊತೆಗೆ ಕೋವಿಡ್ ನಿಯಮಗಳಿಗೆ ಹೆಚ್ಚಿನ ಒತ್ತು ನೀಡಬೇಕು. ಕೋವಿಡ್‍ಗೆ ಸಂಬಂಧಿಸಿದಂತೆ ಜಿಲ್ಲಾಡಳಿತದಿಂದ ಕೋವಿಡ್ ಕಿಟ್‍ಗಳನ್ನು ನೀಡಲಾಗುತ್ತದೆ. ಚುನಾವಣೆ ಸಿಬ್ಬಂದಿಗಳಿಗೆ ಕೋವಿಡ್ ಪರೀಕ್ಷೆಗಳನ್ನು ಮಾಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ಎಸ್​​ಎಸ್ ನಕುಲ್ ತಿಳಿಸಿದರು.

dc-nakul-talk-about-karnataka-teacher-election-2020
ಚುನಾವಣೆ ಪ್ರಕ್ರಿಯೆಗಳ ಜೊತೆಗೆ ಕೋವಿಡ್ ನಿಯಮಗಳಿಗೆ ಹೆಚ್ಚಿನ ಒತ್ತು ನೀಡಿ: ಡಿಸಿ ನಕುಲ್

By

Published : Oct 15, 2020, 9:46 PM IST

ಬಳ್ಳಾರಿ: ಕೋವಿಡ್ ಸಮಯದ ಈ ಬಾರಿಯ ಚುನಾವಣೆಯಲ್ಲಿ ಇವಿಎಂ ಬದಲಾಗಿ ಮತಪೆಟ್ಟಿಗೆಗಳನ್ನು ಬಳಸುತ್ತಿರುವುದು ಒಂದು ಸವಾಲಿನ ಕೆಲಸವಾಗಿದ್ದು, ಇಂತಹ ಸಂದರ್ಭದಲ್ಲಿ ಯಾವುದೇ ರೀತಿ ಆಡಚಣೆಯಾಗದಂತೆ ಸುಸೂತ್ರ ಚುನಾವಣೆ ನಡೆಸಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿಗಳಾದ ಜಿಲ್ಲಾಧಿಕಾರಿ ಎಸ್​​ಎಸ್ ನಕುಲ್ ಹೇಳಿದರು.

ನಗರದ ಬಿಡಿಎಎ ಪುಟ್ಬಾಲ್ ಸಭಾಂಗಣದಲ್ಲಿ ಗುರುವಾರ ನಡೆದ ಈಶಾನ್ಯ ಕರ್ನಾಟಕ ಶಿಕ್ಷಕರ ಮತಕ್ಷೇತ್ರದ ಚುನಾವಣೆ - 2020 ಮತ್ತು ಅಧಿಕಾರಿಗಳಿಗೆ ಮೊದಲ ಹಂತದ ತರಬೇತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಚುನಾವಣೆ ಪ್ರಕ್ರಿಯೆಗಳ ಜೊತೆಗೆ ಕೋವಿಡ್ ನಿಯಮಗಳಿಗೆ ಹೆಚ್ಚಿನ ಒತ್ತು ನೀಡಿ: ಡಿಸಿ ನಕುಲ್

ಈಶಾನ್ಯ ಕರ್ನಾಟಕ ಶಿಕ್ಷಕರ ಮತ ಕ್ಷೇತ್ರದ ಚುನಾವಣೆಯನ್ನು ಅಚ್ಚುಕಟ್ಟಾಗಿ ನಡೆಸುವ ನಿಟ್ಟಿನಲ್ಲಿ ಈಗಾಗಲೇ ಚುನಾವಣಾ ಆಯೋಗದ ನಿರ್ದೇಶನದಂತೆ ಸಕಲ ಕ್ರಮಗಳನ್ನು ಕೈಗೊಳ್ಳಲಾಗಿದೆ. ಚುನಾವಣೆ ಪ್ರಕ್ರಿಯೆಗಳ ಜೊತೆಗೆ ಕೋವಿಡ್ ನಿಯಮಗಳಿಗೆ ಹೆಚ್ಚಿನ ಒತ್ತು ನೀಡಬೇಕು. ಕೋವಿಡ್‍ಗೆ ಸಂಬಂಧಿಸಿದಂತೆ ಜಿಲ್ಲಾಡಳಿತದಿಂದ ಕೋವಿಡ್ ಕಿಟ್‍ಗಳನ್ನು ನೀಡಲಾಗುತ್ತದೆ. ಚುನಾವಣೆ ಸಿಬ್ಬಂದಿಗಳಿಗೆ ಕೋವಿಡ್ ಪರೀಕ್ಷೆಗಳನ್ನು ಮಾಡಲಾಗುತ್ತದೆ ಎಂದು ಅವರು ತಿಳಿಸಿದರು.

ತರಬೇತುದಾರರಾದ ಹೆಚ್.ಆರ್.ಪನಮೇಶಲು ಅವರು ಚುನಾವಣಾ ಸಂದರ್ಭದಲ್ಲಿ ಪಿಆರ್​​ಒ ಮತ್ತು ಎಪಿಆರ್​ಓಗಳ ಕರ್ತವ್ಯಗಳು ಮತ್ತು ಜವಾಬ್ದಾರಿಗಳು ಕುರಿತು ತಿಳಿಸಿದರು.

ಈ ಸಂದರ್ಭದಲ್ಲಿ ಬಳ್ಳಾರಿ ತಹಶೀಲ್ದಾರ್ ಯು.ನಾಗರಾಜ್, ಚುನಾವಣೆಗೆ ನಿಯೋಜಿತರಾದ ಪಿಆರ್​​ಒ ಮತ್ತು ಎಪಿಆರ್​ಒಗಳ ಹಾಗೂ ಚುನಾವಣಾ ಸಿಬ್ಬಂದಿ ಸೇರಿದಂತೆ ಇತರರು ಇದ್ದರು.

ABOUT THE AUTHOR

...view details